ಮೆಕ್ಕೆಜೋಳದ ರಾಶಿಗೆ ಬೆಂಕಿ, ಸುಟ್ಟು ಕರಕಲಾಯ್ತು ಬೆಳೆ

SHIVAMOGGA LIVE NEWS | 9 FEBRUARY 2024

ANAVATTI : ಮೆಕ್ಕೆಜೋಳದ ರಾಶಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ. ಸೊರಬ ತಾಲೂಕು ಆನವಟ್ಟಿ ಸಮೀಪದ ಬೆಣ್ಣೆಗೇರಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಬಸವರಾಜ ಪೇಟ್ಯಾರ್‌ ಎಂಬುವವರು 12 ಎಕರೆ ಹೊಲದಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಮುರಿದು ರಾಶಿ ಹಾಕಿದ್ದರು.

ಮೆಕ್ಕೆಜೋಳದ ರಾಶಿಗೆ ಬೆಂಕಿ ತಗುಲಲು ಕಾರಣವೇನು ಅನ್ನುವುದು ಇನ್ನಷ್ಟೆ ಸ್ಪಷ್ಟವಾಗಬೇಕಿದೆ. ವಿಚಾರ ತಿಳಿದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಸಂಬಂಧ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಇದನ್ನೂ ಓದಿ – ಶಿಕಾರಿಪುರ ಇರಿತ ಪ್ರಕರಣ, ಅಪ್ರಾಪ್ತ ಸೇರಿ ಮೂವರು ಅರೆಸ್ಟ್‌

Mekke-Jola-incident-near-anavatti.

Leave a Comment