KSRTC ಪ್ರಯಾಣಿಕರೆ ಹುಷಾರ್‌, ನಿಲ್ದಾಣದಲ್ಲಿ ಮತ್ತೆ ಟಾರ್ಗೆಟ್‌ ಆಯ್ತು ವ್ಯಾನಿಟಿ ಬ್ಯಾಗ್‌, ಬಸ್‌ ಹತ್ತಿದ್ದ ಶಿಕ್ಷಕಿಗೆ ಬಿಗ್ ಶಾಕ್

SHIVAMOGGA LIVE NEWS | 9 FEBRUARY 2024 

SHIMOGA : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮುಂದುವರೆದಿದೆ. ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ತೆರಳಲು ಬಸ್‌ ಹತ್ತುವ ವೇಳೆ ಶಿಕ್ಷಕಿಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ 4.85 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.  

ಚಿಕ್ಕಮಗಳೂರಿನ ಶಿಕ್ಷಕಿ ವೈಲೆಟ್‌ ವಿಲ್ಮಾ ಗೋನ್ಸಾಲ್ವೆಸ್‌ ಅವರು ಶಿವಮೊಗ್ಗದಲ್ಲಿ ತಮ್ಮ ಸ್ನೇಹಿತರೊಬ್ಬರ ಮದುವೆ ಮುಗಿಸಿ ಊರಿಗೆ ಮರಳುತ್ತಿದ್ದರು. ರಾತ್ರಿ 10 ಗಂಟೆಗೆ ಶಿವಮೊಗ್ಗದ ಕೆಎಸ್‌ಆರ್‌ಟಿಸ್‌ ಬಸ್‌ ನಿಲ್ದಾಣದ ಪ್ಲಾಟ್‌ ಫಾರಂ 3ರಲ್ಲಿ ಬಸ್‌ ಹತ್ತುವಾಗ ರಶ್‌ ಇತ್ತು. ಬಸ್‌ ಹತ್ತಿದ ಬಳಿಕ ಕಂಡಕ್ಟರ್‌ಗೆ ಆಧಾರ್‌ ಕಾರ್ಡ್‌ ತೋರಿಸಲು ವ್ಯಾನಿಟಿ ಬ್ಯಾಗ್‌ಗೆ ಕೈ ಹಾಕಿದಾಗ ಜಿಪ್‌ ತೆಗೆದಿರುವುದು ಗೊತ್ತಾಗಿದೆ. ಒಳಗಿದ್ದ ಪರ್ಸ್‌ ಹುಡುಕಿದಾಗ ಅದು ನಾಪತ್ತೆಯಾಗಿತ್ತು.  

ಪರ್ಸ್‌ನಲ್ಲಿ ಎರಡು ಎಳೆಯ ಮುತ್ತಿನ ಸರ, ಮುತ್ತಿನ ಜುಮ್ಕಿ, ಬಳೆ, ಉಂಗುರ ಇದ್ದವು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ – ವಿದ್ಯುತ್‌ ದರ ಪರಿಷ್ಕರಣಕ್ಕೆ ಜನರಿಂದ ಅಭಿಪ್ರಾಯ ಸಂಗ್ರಹ | ನೀರಿನ ಕಂದಾಯಕ್ಕೆ ವಿಶೇಷ ಕೌಂಟರ್‌ – ಫಟಾಫಟ್‌ ನ್ಯೂಸ್

KSRTC-Bus-General-Image

Leave a Comment