ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 FEBRUARY 2024
SHIMOGA : ನಗರದ ಸಮುದಾಯ ಭವನವೊಂದರಲ್ಲಿ ಅಪ್ರಾಪ್ತೆಯ ವಿವಾಹ ನೆರವೇರಿಸಲಾಗಿದೆ. ವಿಷಯ ತಿಳಿದು ಮಕ್ಕಳ ಸಹಾಯವಾಣಿ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಪ್ರಾಪ್ತೆಯನ್ನು ರಕ್ಷಿಸಿದ್ದಾರೆ. ಮದುವೆ ಶಾಸ್ತ್ರ ಮಾಡಿಸಿದ ಅರ್ಚಕ, ಮದುಮಗ ಸೇರಿದಂತೆ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗದಗ ಜಿಲ್ಲೆಯ 14 ವರ್ಷದ ಬಾಲಕಿಯೊಬ್ಬಳಿಗೆ ಶಿವಮೊಗ್ಗ ನಗರದ ಸಮುದಾಯ ಭವನವೊಂದರಲ್ಲಿ ಜ.30ರಂದು ಮದುವೆ ಮಾಡಲಾಗಿದೆ. ಮುಹೂರ್ತ ಮುಗಿದು ಕೆಲವೆ ನಿಮಿಷದಲ್ಲಿ ವಿಷಯ ತಿಳಿದು ಅಧಿಕಾರಿಗಳು ಸಮುದಾಯ ಭವನಕ್ಕೆ ದಾಳಿ ಮಾಡಿದ್ದಾರೆ.
ಬಾಲಕಿಯನ್ನು ರಕ್ಷಿಸಿರುವ ಅಧಿಕಾರಿಗಳು, ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮದುಮಗ, ಆತನ ಪೋಷಕರು, ಬಾಲಕಿಯ ಪೋಷಕರು, ಮದುವೆ ಮಾಡಿದ ಅರ್ಚಕ ಸೇರಿದಂತೆ 8 ಮಂದಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ವಿವಿಧ ಸೆಕ್ಷನ್‌ಗಳ ಅಡಿ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ – ವಿದ್ಯುತ್ ದರ ಪರಿಷ್ಕರಣಕ್ಕೆ ಜನರಿಂದ ಅಭಿಪ್ರಾಯ ಸಂಗ್ರಹ | ನೀರಿನ ಕಂದಾಯಕ್ಕೆ ವಿಶೇಷ ಕೌಂಟರ್ – ಫಟಾಫಟ್ ನ್ಯೂಸ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422