ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 10 FEBRUARY 2024
SHIMOGA : ‘ಗುಂಡಿಕ್ಕಿ ಕೊಲ್ಲಬೇಕುʼ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ದಾವಣಗೆರೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ದಾವಣಗೆರೆಯ ಬಡಾವಣೆ ಠಾಣೆ ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ.
ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ನಿವಾಸಕ್ಕೆ ಶನಿವಾರ ಆಗಮಿಸಿದ್ದ ದಾವಣಗೆರೆ ಪೊಲೀಸರು, ನೊಟೀಸ್ ಜಾರಿ ಮಾಡಿದ್ದಾರೆ. ಈಶ್ವರಪ್ಪ ಅವರು ಖುದ್ದು ನೊಟೀಸ್ ಸ್ವೀಕರಿಸಿದ್ದಾರೆ.
ನೊಟೀಸ್‌ನಲ್ಲಿ ಏನಿದೆ?
ಬಡಾವಣೆ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಲತಾ ವಿ.ತಾಳೆಕರ್ ಅವರು ನೊಟೀಸ್ ಜಾರಿ ಮಾಡಿದ್ದಾರೆ. ‘ಫೆ.9ರಂದು ತಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಕೆಲವು ಸತ್ಯಾಂಶ ಮತ್ತು ಸನ್ನಿವೇಶಗಳನ್ನು ಖಚಿತಪಡಿಸಿಕೊಳ್ಳಬೇಕಿದೆ. ವಿಚಾರಣೆ ಮಾಡಲು ಪೂರಕ ಕಾರಣಗಳು ಕಂಡು ಬಂದಿವೆ. ಆದ್ದರಿಂದ ತಾವು ಫೆ.15ರಂದು ಬೆಳಗ್ಗೆ 10.30ಕ್ಕೆ ಬಡಾವಣೆ ಠಾಣೆಗೆ ಹಾಜರಾಬೇಕುʼ ಎಂದು ನೊಟೀಸ್‌ನಲ್ಲಿ ತಿಳಿಸಲಾಗಿದೆ.
ನೂರು ನೊಟೀಸ್ ಬಂದರು ಹೆದರಲ್ಲ
ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ‘ಸಂಸದ ಡಿ.ಕೆ.ಸುರೇಶ್ ಅವರಿಗೆ ಗುಂಡಿಕ್ಕಿ ಎಂದು ಹೇಳಿಲ್ಲ. ರಾಷ್ಟ್ರದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೆ. ತಮ್ಮ ಹೇಳಿಕೆ ಕುರಿತು ಗೊಂದಲ ಸೃಷ್ಟಿಸಲಾಗುತ್ತಿದೆ. ಈಗ ನೊಟೀಸ್ ಬಂದಿದೆ. ಅದಕ್ಕೆ ಉತ್ತರ ಕೊಡುತ್ತೇನೆ. ಇಂತಹ ನೂರು ನೊಟೀಸ್ ಬಂದರು ಹೆದರುವುದಿಲ್ಲʼ ಎಂದು ತಿಳಿಸಿದರು.
ಈಶ್ವರಪ್ಪಗೆ ಯಡಿಯೂರಪ್ಪ ಅಭಯ
ಇನ್ನು, ಈಶ್ವರಪ್ಪಗೆ ನೊಟೀಸ್ ನೀಡಿರುವ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ‘ಈಶ್ವರಪ್ಪ ಅವರ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ಅವರು ಹೊಸ ಕಾನೂನು ತರುವಂತೆ ಮನವಿ ಮಾಡಿದ್ದರು. ಆದರೆ ತಪ್ಪು ಕಲ್ಪನೆಯಿಂದ ಎಫ್‌ಐಆರ್ ದಾಖಲು ಮಾಡಲಾಗಿದೆ. ಈಶ್ವರಪ್ಪ ಅವರು ಕಾನೂನು ಹೋರಾಟ ಮಾಡಲಿದ್ದಾರೆʼ ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗ ವಿದ್ಯಾನಗರ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮ ದಿಢೀರ್ ರದ್ದು, ಕಾರಣವೇನು?
LATEST NEWS
- ಡಿ.ಬಿ.ಹಳ್ಳಿ ಕ್ರಾಸ್‌ನಲ್ಲಿ ಅಪಘಾತ, ಮಹಿಳೆಯ ಕೈ ಮೂಳೆ ಕಟ್, ಆಗಿದ್ದೇನು?

- ಕೋಟೆ ದೇಗುಲದಲ್ಲಿ ದೇವರಿಗೆ ಮಹಾವಿಷ್ಣು ಅಲಂಕಾರ, ಪಂಚಾಂಗ ಶ್ರವಣ, ಇವತ್ತು ಯಾವ ಅಲಂಕಾರ ಇರಲಿದೆ?

- ಶಿವಮೊಗ್ಗದಲ್ಲಿ ಯುವಕನ ಮೇಲೆ ಬಿಯರ್ ಬಾಟಲಿಯಿಂದ ಅಟ್ಯಾಕ್, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ಜಾಸ್ತಿಯಾಗಲಿದೆ ಬಿಸಿಲು, ರಾತ್ರಿ ವೇಳೆ ಮುಂದುವರೆಯುತ್ತಾ ತಂಪು?

- ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

About The Editor
ನಿತಿನ್ ಆರ್.ಕೈದೊಟ್ಲು
















