ತೀರ್ಥಹಳ್ಳಿಯಲ್ಲಿ ಒಂದೇ ದಿನ 6 ಮಂದಿಗೆ ಕೆಎಫ್‌ಡಿ ಪಾಸಿಟಿವ್‌, ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ದೌಡು

SHIVAMOGGA LIVE NEWS | 13 FEBRUARY 2024 (ಈ ಸುದ್ದಿಯನ್ನು ಇನ್ನು 39 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ತೀರ್ಥಹಳ್ಳಿ ತಾಲೂಕಿನ ಆರು ಮಂದಿಗೆ ಕೆಎಫ್‌ಡಿ (ಮಂಗನ ಕಾಯಿಲೆ) ಪಾಸಿಟಿವ್‌ ಬಂದಿದೆ. ಸೋಂಕಿತರನ್ನು ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು, ವಿಷಯ ತಿಳಿದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್‌ ಸುರಗಿಹಳ್ಳಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಕುರಿತು ಮಾಹಿತಿ ಪಡೆದರು.

ಜಿಲ್ಲೆಯಲ್ಲಿ 42 ಮಂದಿಯ ಮಾದರಿ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 6 ಮಂದಿಗೆ ಕೆಎಫ್‌ಡಿ ಸೋಂಕು ದೃಢವಾಗಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ರಿಪೋರ್ಟ್‌ನಲ್ಲಿ ತಿಳಿಸಲಾಗಿದೆ. ಜ್ವರ ಕಾಣಿಸಿಕೊಂಡ ಹಿನ್ನೆಲೆ ಆರು ಮಂದಿಯ ರಕ್ತದ ಮಾದರಿಯನ್ನು ಶಿವಮೊಗ್ಗದ ವಿಡಿಎಲ್‌ ಲ್ಯಾಬ್‌ಗೆ ರವಾನಿಸಲಾಗಿತ್ತು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಫೆ.12ರಂದು ಚಿಕ್ಕಮಗಳೂರು ಜಿಲ್ಲೆಯಲ್ಲು 7 ಮಂದಿಗೆ ಕೆಎಫ್‌ಡಿ ಪಾಸಿಟಿವ್‌ ಬಂದಿದೆ. ಅವರಿಗು ಚಿಕಿತ್ಸೆ ನಡೆಸಲಾಗುತ್ತಿದೆ.

ಇದನ್ನೂ ಓದಿ – ವೀಲಿಂಗ್‌ ಮಾಡಿದವನಿಗೆ ಭಾರಿ ದಂಡ, ವಿಡಿಯೋ ವೈರಲ್‌ | ಬೈಕ್‌ ಚಲಾಯಿಸಿದ ಮಗ, ತಾಯಿಗೆ 30 ಸಾವಿರ ದಂಡ

DHO-Rajesh-Suragihalli-Visit-JC-Hospital-thirthahali

Leave a Comment