ವಾಟ್ಸಪ್‌ ಸ್ಟೇಟಸ್‌ ಪ್ರಿಯರಿಗೆ ಗುಡ್‌ ನ್ಯೂಸ್‌, ಸದ್ಯದಲ್ಲೆ ಬರಲಿದೆ ಹೊಸ ಫೀಚರ್

SHIVAMOGGA LIVE NEWS | 19 FEBRUARY 2024

WHATSAPP : ಹೊಸ ಫೀಚರ್‌ಗಳಿಂದಾಗಿ ವಾಟ್ಸಪ್‌ನ ಸ್ಟೇಟಸ್‌ ಬಾರ್‌ ಚಿಕ್ಕದಾಗಿತ್ತು. ಅಲ್ಲದೆ ಬಳಕೆದಾರರು ಯಾವೆಲ್ಲ ಸ್ಟೇಟಸ್‌ ಅಪ್‌ಲೋಡ್‌ ಮಾಡಿದ್ದಾರೆ ಅನ್ನುವದೇ ಗೊತ್ತಾಗದಂತಾಗಿತ್ತು. ಸ್ಟೇಟಸ್‌ ಪ್ರಿಯರಿಗಂತಲು ಹೊಸ ಮಾದರಿಯ ಡಿಸೈನ್‌ ಕಿರಿಕಿರಿ ಉಂಟು ಮಾಡಿತ್ತು. ವಿಷಯ ತಿಳಿಯುತ್ತಲೆ ವಾಟ್ಸಪ್‌ ಸಂಸ್ಥೆ ತನ್ನ ಸ್ಟೇಟಸ್‌ ಟ್ರೇಗೆ ಹೊಸ ರೂಪ ನೀಡಲು ನಿರ್ಧರಿಸಿದೆ.

ಬಳಕೆದಾರರ ಅನುಕೂಲಕ್ಕೆ ತಕ್ಕ ಹಾಗೆ ಸ್ಟೇಟಸ್‌ ಮತ್ತು ವಾಟ್ಸಪ್‌ ಚಾನಲ್‌ ಕಾಣುವಂತೆ ವ್ಯವಸ್ಥೆ ಮಾಡಲು ವಾಟ್ಸಪ್‌ ಮುಂದಡಿ ಇಟ್ಟಿದೆ. ಈಗಾಗಲೆ ಬೀಟಾ ವರ್ಷನ್‌ನಲ್ಲಿ ಹೊಸ ಮಾದರಿಯನ್ನು ಟೆಸ್ಟ್‌ಗೆ ಬಿಡಲಾಗಿದೆ. ಮುಂದಿನ ಅಪ್‌ಡೇಟ್‌ನಲ್ಲಿ ಎಲ್ಲ ಬಳಕೆದಾರರಿಗು ಹೊಸ ಮಾದರಿಯ ಸ್ಟೇಟಸ್‌ ಟ್ರೇ ಕಾಣಸಿಗಲಿದೆಯಂತೆ.

ಇದನ್ನೂ ಓದಿ – ಹುಂಡೈ ಶೋ ರೂಂಗೆ ಬೆಂಕಿ, ಟಾಟಾ ಕಾರುಗಳು ಅಗ್ನಿಗಾಹುತಿ, ಬೆಂಕಿ ಹೊತ್ತಿದ್ದೇಕೆ? ಏನೇನೆಲ್ಲ ಸುಟ್ಟು ಹೋಗಿದೆ?

whatsapp-feature-news-thumbnail.webp

Leave a Comment