ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 FEBRUARY 2024
SHIMOGA : ವಿಚಾರಣಾಧೀನ ಕೈದಿಯೊಬ್ಬ ಗುದದ್ವಾರದಲ್ಲಿ ಗಾಂಜಾ ಬಚ್ಚಿಟ್ಟುಕೊಂಡು ಜೈಲಿನೊಳಗೆ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಆತನ ವಿರುದ್ಧ ಜೈಲು ಸೂಪರಿಂಟೆಂಡೆಂಟ್ ಅವರು ದೂರು ನೀಡಿದ್ದು, ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿ ಸಚಿನ್ ಎಂಬಾತನನ್ನು ಹಾಸನದ ನ್ಯಾಯಾಲಯಕ್ಕೆ ವಿಚಾರಣೆಗೆ ಕರೆದೊಯ್ಯಲಾಗಿತ್ತು. ಫೆ.19ರಂದು ಆತ ಜೈಲಿಗೆ ಮರಳಿದ್ದ. ಜೈಲಿನೊಳಗೆ ತೆರಳುವ ಮುನ್ನ ಸಚಿನ್ನನ್ನು ಪರಿಶೀಲಿಸಿದಾಗ ಗುದದ್ವಾರದಲ್ಲಿ ಹಳದಿ ಬಣ್ಣದ ಪೇಪರ್ನಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿತ್ತು. ಅದನ್ನು ವಶಕ್ಕೆ ಪಡೆದ ಕೆಎಸ್ಐಎಸ್ಎಫ್ ಸಿಬ್ಬಂದಿ, ಪರಿಶೀಲಿಸಿದಾಗ ಗಾಂಜಾ ಇರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ – ಶಿವಮೊಗ್ಗ ತಹಶೀಲ್ದಾರ್ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ಮೀಟಿಂಗ್, 4 ಪ್ರಮುಖ ವಿಚಾರಗಳ ಮಹತ್ವದ ಚರ್ಚೆ, ಏನೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422