ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್‌

Published On : ಮಾರ್ಚ್ 18, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ನಗರದಲ್ಲಿ ಸಂಜೆ ವೇಳೆಗೆ ಅಲಿಕಲ್ಲು ಮಳೆಯಾಗಿದೆ. ಗುಡುಗು, ಮಿಂಚು, ಭಾರಿ ಗಾಳಿ ಸಹಿತ ಮಳೆ ಸುರಿದಿದೆ. ಇದರಿಂದ ಶಿವಮೊಗ್ಗ ಸಿಟಿಯ ಹಲವೆಡೆ ಹಾನಿ ಉಂಟಾಗಿದೆ (widespread damage). ಈ ಸಂಬಂಧ ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್‌.

ಆಲಿಕಲ್ಲು ಖುಷಿ ಕೆಲವೇ ಕ್ಷಣ

ಸಂಜೆ ಮಳೆಗು ಮುನ್ನ ಆಲಿಕಲ್ಲು ಬೀಳಲು ಆರಂಭವಾಯಿತು. ಜನರು ಸಂಭ್ರಮದಿಂದ ಆಲಿಕಲ್ಲುಗಳನ್ನು ಆರಿಸಿಕೊಂಡು ಖುಷಿ ಪಟ್ಟರು. ಕೆಲವರು ಬಕೆಟ್‌ಗಳಲ್ಲಿ, ಪಾತ್ರೆಗಳಲ್ಲಿ ಆಲಿಕಲ್ಲುಗಳನ್ನು ತುಂಬಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲು ಆಲಿಕಲ್ಲಿನ ಫೋಟೊಗಳನ್ನು ಹಂಚಿಕೊಂಡು ಖುಷಿ ಪಟ್ಟರು. ಇನ್ನೊಂದೆಡೆ ಆಲಿಕಲ್ಲು ಬಿದ್ದು ಕಾರುಗಳ ಗಾಜಿಗೆ ಹಾನಿಯಾಗಿದೆ. ದುರ್ಗಿಗುಡಿಯಲ್ಲಿ ನಿಲ್ಲಿಸಿದ್ದ ಕಾರಿನ ಮುಂಭಾಗದ ಗಾಜು ಹಾನಿಯಾಗಿದೆ.

Heavy-Rainfall-in-Shimoga-city.

ಭಾರಿ ಗಾಳಿ, ಜೋರು ಮಳೆಗೆ ಹಾನಿ

ಇನ್ನು, ಶಿವಮೊಗ್ಗ ಸಿಟಿಯಲ್ಲಿ ಜೋರು ಗಾಳಿ ಸಹಿತ ಭಾರಿ ಮಳೆ ಸುರಿಯಿತು. ಕೆಲವು ಹೊತ್ತು ನಿರಂತರ ಮಳೆಯಾಯಿತು. ಇದರ ಬೆನ್ನಿಗೆ ನಗರದ ವಿವಿಧೆಡೆ ಹಾನಿ ಸಂಭವಿಸಿದೆ. ಎಲ್ಲೆಲ್ಲಿ ಏನೇನಾಗಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Rain-effect-in-Shimoga-city

ಗಾಳಿಯ ರಭಸಕ್ಕೆ ನಗರದಾದ್ಯಂತ ಮರ, ಗಿಡಗಳ ಎಲೆಗಳು ಉದುರಿ ರಸ್ತೆ, ಫುಟ್‌ಪಾತ್‌ಗಳ ಮೇಲೆ ಬಿದ್ದಿವೆ. ನಗರ ಹಸಿರುಮಯವಾಗಿದೆ. ರಸ್ತೆ ಮೇಲೆ ವಾಹನಗಳು ಓಡಾಡಿ ಎಲೆಗಳ ವಾಸನೆ ಬರುತ್ತಿದೆ. ಆಲ್ಕೊಳದ ವಿಶಾಲ್‌ ಮಾರ್ಟ್‌ ಮುಂಭಾಗ ಮರದಿಂದ ಬಿದ್ದ ಕಾಯಿಗಳಿಂದಾಗಿ ದ್ವಿಚಕ್ರ ವಾಹನ ಸವಾರು ಜಾರಿ ಬೀಳುವಂತಾಗಿತ್ತು.

ಗಾಳಿ ಅಬ್ಬರಕ್ಕೆ ಹಲವೆಡೆ ಮರದ ರೆಂಬೆಗಳು ತುಂಡಾಗಿ ಬಿದ್ದಿವೆ. ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮರದ ರೆಂಬೆ ಮುರಿದು ಬಿದ್ದು ಆಟೋ ಜಖಂ ಆಗಿದೆ. ಆಲ್ಕೊಳದ ವಿಶಾಲ್‌ ಮಾರ್ಟ್‌ ಸಮೀಪ ದ್ವಿಚಕ್ರ ವಾಹನಗಳ ಮೇಲೆ ರೆಂಬೆ ಬಿದ್ದಿತ್ತು. ನ್ಯೂ ಮಂಡ್ಲಿಯಲ್ಲಿ ಮನೆಯೊಂದರ ಹೆಂಚುಗಳು ಉದುರಿ ಬಿದ್ದಿವೆ.

Rain-effect-in-Shimoga-city

ಭಾರಿ ಮಳೆಯಿಂದಾಗಿ ಹಲವೆಡೆ ರಸ್ತೆ ಮೇಲೆ ನೀರು ನಿಂತಿತ್ತು. ನಗರದ ಜೈಲ್‌ ರಸ್ತೆಯಲ್ಲಿ ಚರಂಡಿಗಳು ಭರ್ತಿಯಾಗಿದ್ದು ರಸ್ತೆ ಮೇಲೆ ನೀರು ನಿಂತಿತ್ತು. ಇನ್ನು, ವಿವಿಧೆಡೆ ರಸ್ತೆ ಮೇಲೆ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಶಿವಮೊಗ್ಗ ಸಿಟಿಯಲ್ಲಿ ಎಲ್ಲೆಲ್ಲಿ ಏನೇನಾಯ್ತು ಇಲ್ಲಿದೆ ಫೋಟೊ ರಿಪೊರ್ಟ್‌

ಇದನ್ನೂ ಓದಿ – ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

Rain-effect-in-Shimoga-city
Rain-effect-in-Shimoga-city
Rain-effect-in-Shimoga-city
Rain-effect-in-Shimoga-city
Rain-effect-in-Shimoga-city
Rain-effect-in-Shimoga-city
Rain-effect-in-Shimoga-city
Rain-effect-in-Shimoga-city
JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 18, 2026

Leave a Comment