ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 FEBRUARY 2024
SHIMOGA : ನಗರದ ಅಲ್ಲಮಪ್ರಭು ಮೈದಾನದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶ ನಡೆಯಿತು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಫಲಾನುಭವಿಗಳು ಯೋಜನೆಯಿಂದ ತಮಗಾದ ಅನಕೂಲದ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಯಾರೆಲ್ಲ ಏನೇನು ಅಭಿಪ್ರಾಯ ಹೇಳಿದರು?
ಫಾತಿಮಾ ರೋಡ್ರಿಗಸ್, ತೀರ್ಥಹಳ್ಳಿ : ಗೃಹಲಕ್ಷ್ಮಿ ಯೋಜನೆಯ ಹಣ ‘ನನ್ನ ಹಣ’ ಎಂಬ ಹೆಮ್ಮೆ ಇದೆ. ಈ ಯೋಜನೆಯ ಸೌಲಭ್ಯ ಪಡೆಯುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಈ ಹಣವು ನನ್ನ ವೈದ್ಯಕೀಯ ವೆಚ್ಚ, ಇತರೆ ವೆಚ್ಚ ಭರಿಸಲು ಸಹಕಾರಿಯಾಗಿದೆ. ಇದುವರೆಗೆ ಒಟು 12 ಸಾವಿರ ರೂ. ನನಗೆ ಸಿಕ್ಕಿದೆ. ಅಷ್ಟಾಗಿ ಆರೋಗ್ಯ ಸರಿಯಿಲ್ಲದ ನನಗೆ ಈ ಯೋಜನೆ ಒಂದು ಭದ್ರತೆ ಒದಗಿಸಿದ್ದು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
ರಾಜೇಶ್, ಶಿವಮೊಗ್ಗ : ನಾವು 11 ಜನ ಮಕ್ಕಳು. ನಮ್ಮ ಮನೆಯಲ್ಲಿ ಖರ್ಚುವೆಚ್ಚ ಭರಿಸುವುದು ಬಹಳ ಕಷ್ಟವಾಗುತ್ತಿತ್ತು. ಗೃಹಜ್ಯೋತಿ ಯೋಜನೆಯಿಂದಾಗಿ ನಮ್ಮ ಕಟುಂಬಕ್ಕೆ ಸಹಾಯವಾಗಿದೆ. ಕೃಷಿ ಕೆಲಸ ಮಾಡುತ್ತಿದ್ದೇವೆ. ವಿದ್ಯುತ್ ಬಿಲ್ 700 ರಿಂದ 800 ರೂ. ಬರುತ್ತಿತ್ತು. ಈಗ ಗೃಹ ಜ್ಯೋತಿ ಯೋಜನೆಯಿಂದ ಕುಟುಂಬಕ್ಕೆ ಅನುಕೂಲ ಆಗಿದೆ.
ಮಧು, ಅನ್ನಭಾಗ್ಯ ಯೋಜನೆ ಫಲಾನುಭವಿ : ನನ್ನ ಬದುಕಿಗೆ ಅನ್ನಭಾಗ್ಯ ಯೋಜನೆಯಿಂದ ಸಹಾಯವಾಗಿದೆ. 5 ಕೆಜಿ ಅಕ್ಕಿ ಹಾಗೂ ಐದು ಕೆಜಿ ಅಕ್ಕಿಯ ಬದಲು ನೀಡುತ್ತಿರುವ ಹಣದಿಂದ ಇತರೆ ಪದಾರ್ಥಗಳ ಖರೀದಿ ಮಾಡುತ್ತಿದ್ದು, ಕುಟುಂಬಕ್ಕೆ ಆಸರೆಯಾಗಿದೆ.
ಶಾಲಿನಿ, ಭದ್ರಾವತಿ : ಶಿವಮೊಗ್ಗದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದೇನೆ. ನಿತ್ಯ ಭದ್ರಾವತಿ ಶಿವಮೊಗ್ಗ ಬಸ್ನಲ್ಲಿ ಓಡಾಡುತ್ತೇನೆ. ತಿಂಗಳಿಗೆ 1500 ರೂ. ಬಸ್ ಚಾರ್ಜ್ಗೆ ಖರ್ಚಾಗುತ್ತಿತ್ತು. ಈಗ ಉಚಿತ ಬಸ್ನಿಂದ ಹಣ ಉಳಿತಾಯವಾಗಿದೆ. ಮಹಿಳೆಯರು ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ.
ಇದನ್ನೂ ಓದಿ – ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಅಂದವರಿಗೆ ಶಿವಮೊಗ್ಗದಲ್ಲಿ ಡಿಕೆಶಿ ತಿರುಗೇಟು, ಏನಂದ್ರು ಡಿಸಿಎಂ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422