ಶಿವಮೊಗ್ಗ ಜಿಲ್ಲೆಯ 2 ಟೋಲ್‌ಗಳಲ್ಲಿ ಯಾವ್ಯಾವ ವಾಹನಕ್ಕೆ ಎಷ್ಟು ನಿಗದಿಯಾಗಿದೆ ದರ? ಇಲ್ಲಿದೆ ಲಿಸ್ಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 29 FEBRUARY 2024

SHIMOGA : ಜಿಲ್ಲೆಯಲ್ಲಿ ಸ್ಥಾಪಿಸಿರುವ ಎರಡು ಟೋಲ್‌ ಪ್ಲಾಜಾಗಳಲ್ಲಿ ಮಾರ್ಚ್‌ 1ರಿಂದ ಟೋಲ್‌ ಸಂಗ್ರಹಿಸುವ ಕಾರ್ಯ ಅರಂಭವಾಗುವ ಸಾಧ್ಯತೆ ಇದೆ. ಈಗಾಗಲೆ ಪೂರ್ವ ಸಿದ್ಧತೆಗಳನ್ನು ನಡೆಸಲಾಗಿದೆ. ಅಲ್ಲದೆ ಟೋಲ್‌ ದರಗಳ ಪಟ್ಟಿಯು ಹೊರ ಬಿದ್ದಿದೆ.

Toll Plaza in savalanga road

ಏನೆಲ್ಲ ಸಿದ್ಧತೆಯಾಗಿದೆ?

ಸವಳಂಗ ಸಮೀಪ ನಿರ್ಮಿಸಲಾಗಿರುವ ಟೋಲ್‌ ಪ್ಲಾಜಾದಲ್ಲಿ ಬುಧವಾರ ಅಂತಿಮ ಹಂತದ ಸಿದ್ಧತೆ ನಡೆಸಲಾಯಿತು. ಗುತ್ತಿಗೆ ಪಡೆದಿರುವ ಸಂಸ್ಥೆಯ ಸಿಬ್ಬಂದಿ ಟೋಲ್‌ ಪ್ಲಾಜಾದ ವಿವಿಧ ಉಪಕರಣಗಳ ಪರಿಶೀಲನೆ ನಡೆಸಿದರು. ಸಿಸಿಟಿವಿ, ಲೈಟಿಂಗ್‌ ವ್ಯವಸ್ಥೆ, ಮೆಸ್ಕಾಂ ಸಿಬ್ಬಂದಿಯಿಂದ ವಿದ್ಯುತ್‌ ಪೂರೈಕೆಯ ಪರಿಶೀಲನೆ ನಡೆಸಲಾಯಿತು. ಈಗಾಗಲೇ ಟೋಲ್‌ ಪ್ಲಾಜಾದ ಎರಡು ಕಡೆ ರಸ್ತೆ ಬದಿಯಲ್ಲಿ ಸ್ಥಳೀಯರು ಅಂಗಡಿಗಳನ್ನು ಸ್ಥಾಪಿಸಿದ್ದಾರೆ.

Toll Plaza power supply

ಯಾವ್ಯಾವ ವಾಹನಕ್ಕೆ ಎಷ್ಟಿದೆ ಟೋಲ್?‌

  • ಶಿವಮೊಗ್ಗ – ಶಿಕಾರಿಪುರ
ವಾಹನಏಕಮುಖ ಸಂಚಾರದ್ವಿಮುಖ ಸಂಚಾರಮಾಸಿಕ ದರ
ಕಾರು, ಜೀಪ್‌, ವ್ಯಾನ್‌, ಲಘು ವಾಹನರೂ. 35ರೂ. 55ರೂ. 1245
ಲಘು ವಾಣಿಜ್ಯ, ಗೂಡ್ಸ್‌, ಮಿನಿ ಬಸ್‌ರೂ. 60ರೂ.90ರೂ. 2005
ಬಸ್‌, ವಾಣಿಜ್ಯ ವಾಹನ (ಡಬಲ್‌ ಆಕ್ಸಲ್)ರೂ. 125ರೂ.190ರೂ. 4205
ಬಸ್‌, ವಾಣಿಜ್ಯ ವಾಹನ (ಮೂರು ಆಕ್ಸಲ್)‌ರೂ. 130ರೂ. 195ರೂ. 4285
ಭಾರಿ ನಿರ್ಮಾಣ ಯಂತ್ರೋಪಕರಣ, ನಾಲ್ಕರಿಂದ ಆರು ಆಕ್ಸಲ್‌ ವಾಹನ, ಅರ್ಥ್‌ ಮೂವಿಂಗ್‌ ಉಪಕರಣರೂ.200ರೂ. 295ರೂ. 6595
ಭಾರಿ ಗಾತ್ರದ ವಾಹನ (ಏಳು ಅಥವಾ ಹೆಚ್ಚು ಆಕ್ಸಲ್)ರೂ. 240ರೂ. 360ರೂ. 8030

Toll Plaza in Savalanga Road

  • ಶಿಕಾರಿಪುರ ಹಾನಗಲ್‌
ವಾಹನಏಕಮುಖ ಸಂಚಾರದ್ವಿಮುಖ ಸಂಚಾರಮಾಸಿಕ ದರ
ಕಾರು, ಜೀಪ್‌, ವ್ಯಾನ್‌, ಲಘು ವಾಹನರೂ. 50ರೂ.70ರೂ. 1600
ಲಘು ವಾಣಿಜ್ಯ, ಗೂಡ್ಸ್‌, ಮಿನಿ ಬಸ್‌ರೂ. 75ರೂ. 115ರೂ. 2585
ಬಸ್‌, ವಾಣಿಜ್ಯ ವಾಹನ (ಡಬಲ್‌ ಆಕ್ಸಲ್)ರೂ. 160ರೂ. 245ರೂ. 5415
ಬಸ್‌, ವಾಣಿಜ್ಯ ವಾಹನ (ಮೂರು ಆಕ್ಸಲ್)‌ರೂ. 165ರೂ. 250ರೂ. 5510
ಭಾರಿ ನಿರ್ಮಾಣ ಯಂತ್ರೋಪಕರಣ, ನಾಲ್ಕರಿಂದ ಆರು ಆಕ್ಸಲ್‌ ವಾಹನ, ಅರ್ಥ್‌ ಮೂವಿಂಗ್‌ ಉಪಕರಣರೂ. 255ರೂ. 380ರೂ. 8490
ಭಾರಿ ಗಾತ್ರದ ವಾಹನ (ಏಳು ಅಥವಾ ಹೆಚ್ಚು ಆಕ್ಸಲ್)ರೂ. 310ರೂ. 465ರೂ. 10335

ಇದನ್ನೂ ಓದಿ – ಇನ್ಮುಂದೆ ಶಿವಮೊಗ್ಗದ ಜನರಿಗು ತಟ್ಟಲಿದೆ ಟೋಲ್‌ ಬಿಸಿ, 2 ಕಡೆ ಟೋಲ್‌ ಪ್ಲಾಜಾ ರೆಡಿ, ಎಲ್ಲೆಲ್ಲಿದೆ? ಪರಿಣಾಮಗಳೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment