ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 MARCH 2024
SHIMOGA : ಕಲ್ಲಹಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಜನ್ಮದಿನಾಚರಣೆ ಮಾಡಲಾಯಿತು. ಅಭಿಮಾನಿಗಳು, ಬೆಂಬಲಿಗರು ದೊಡ್ಡ ಹಾರ ಹಾಕಿ, ಕೇಕ್ ಕತ್ತರಿಸಿ ಶುಭ ಕೋರಿದರು. ಇದೇ ವೇಳೆ ಬೆಂಗಳೂರಿನಿಂದ ಬಂದಿದ್ದ ವಿಶೇಷ ಕೇಕ್ನ ಸೀಕ್ರೆಟ್ ಕುರಿತು ನಟ ಶಿವರಾಜ್ ಕುಮಾರ್ ತಿಳಿಸಿದರು.
ವಿಮಾನ ನಿಲ್ದಾಣದಿಂದ ಮೆರವಣಿಗೆ
ಬೆಂಗಳೂರಿನಿಂದ ವಿಮಾನದಲ್ಲಿ ಆಗಮಿಸಿದ್ದ ಮಧು ಬಂಗಾರಪ್ಪ ಅವರನ್ನು ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮೆರವಣೆಗೆ ಮೂಲಕ ಕರೆತರಲಾಯಿತು. ಕಲ್ಲಹಳ್ಳಿಯಲ್ಲಿರುವ ಅವರ ಮನೆಯವರೆಗೆ ಮೆರವಣಿಗೆ ನಡೆಸಲಾಯಿತು. ಮಾರ್ಗ ಮಧ್ಯೆ ಶಿವಪ್ಪನಾಯಕ ಪ್ರತಿಮೆಗೆ ಸಚಿವ ಮಧು ಬಂಗಾರಪ್ಪ, ಗೀತಾ ಶಿವರಾಜ್ಕುಮಾರ್ ಮತ್ತು ನಟ ಶಿವರಾಜ್ಕುಮಾರ್ ಅವರು ಮಾಲಾರ್ಪಣೆ ಮಾಡಿದರು.
ವಿವಿಧೆಡೆಯ ಅಭಿಮಾನಿಗಳ ದಂಡು
ಕಲ್ಲಹಳ್ಳಿಯ ನಿವಾಸದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಅಭಿಮಾನಿಗಳು ಮಧು ಬಂಗಾರಪ್ಪ ಅವರಿಗೆ ಹೂಗುಚ್ಛ ನೀಡಿ ಶುಭ ಕೋರಿದರು. ಸಮಾರಂಭಕ್ಕೆ ಬಂದವರಿಗೆ ಭರ್ಜರಿ ಬಾಡೂಟ ಮತ್ತು ಸಸ್ಯಹಾರದ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ 2 ದಿನ ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ, ಹೊಸದಾಗಿ 2 ಸ್ಪರ್ಧೆ ಸೇರ್ಪಡೆ
ಕೇಕ್ ಸೀಕ್ರೆಟ್ ತಿಳಿಸಿದ ಶಿವಣ್ಣ
ಮಧುಬಂಗಾರಪ್ಪ ಹುಟ್ಟುಹಬ್ಬಕ್ಕಾಗಿ ಸಹೋದರಿ ಗೀತಾ ಶಿವರಾಜಕುಮಾರ್ ವಿಶೇಷ ಕೇಕ್ ತಯಾರಿಸಿ ತಂದಿದ್ದರು. ಈ ಕುರಿತು ನಟ ಶಿವರಾಜ್ ಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ‘ತಮ್ಮನಿಗಾಗಿ ಗೀತಾ ಬಹಳ ಪ್ರೀತಿಯಿಂದ ಕೇಕ್ ತಯಾರಿಸಿದ್ದಾರೆ. ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 4 ಗಂಟೆವರೆಗೆ ಕೇಕ್ ಸಿದ್ದಪಡಿಸಿದ್ದರುʼ ಎಂದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422