ನವುಲೆ ಸುತ್ತಮುತ್ತ ಚಿರತೆ ಬಂತು ಚಿರತೆ, ವಾಟ್ಸಪ್‌ನಲ್ಲಿ ವದಂತಿ

SHIVAMOGGA LIVE NEWS | 1 APRIL 2024 (ಈ ಸುದ್ದಿಯನ್ನು ಇನ್ನು 40 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ನವುಲೆ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿರುವ ವಂದತಿ ಹಬ್ಬಿದೆ. ಇದರು ಅಕ್ಕಪಕ್ಕದ ಬಡಾವಣೆ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಇನ್ನು, ಈ ಕುರಿತು ಪರಿಶೀಲಿಸಿ ಬೋನ್‌ ಇರಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನವುಲೆ, ಧವಳಗಿರಿ, ಇಂದಿರಾ ಬಡಾವಣೆ, ಶಿವಬಸವನಗರ, ಬಂಜಾರ ಸಭಾ ಭವನ, ಅರುಣೋದಯ ಶಾಲೆ ಹಿಂಭಾಗದ ಪ್ರದೇಶ, ಹೆಗ್ಗೇರಿ, ಶ್ರೀ ವೀರಭದ್ರೇಶ್ವರ ಬಡಾವಣೆ, ಸಾನ್ವಿ ಲೇಔಟ್‌ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ ಬಳಿ ಚಿರತೆ ಕಾಣಿಸಿಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

 ಇದನ್ನೂ ಓದಿ  – ಜಾತ್ರೆಯಲ್ಲಿ ಪೊಲೀಸ್‌ ಸಿಬ್ಬಂದಿ ಕೊರಳ ಪಟ್ಟಿ ಹಿಡಿದು, ಕಪಾಳಕ್ಕೆ ಹೊಡೆದ ಯುವಕರು

ಸಮೀಪದ ಬೀರನಕೆರೆಯಲ್ಲಿ ಚಿರತೆಗಳ ಓಡಾಟವಿದೆ. ಆದರೆ ನವುಲೆ ಭಾಗದಲ್ಲಿ ಅವು ಕಂಡು ಬಂದಿಲ್ಲ. ಪರಿಶೀಲನೆ ನಡೆಸಿ ಬೋನು ಇರಿಸಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ವಾಟ್ಸಪ್‌ನಲ್ಲಿ ಹಬ್ಬಿರುವ ವದಂತಿಯಿಂದಾಗಿ ಸುತ್ತಮುತ್ತಲ ಬಡಾವಣೆ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment