ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 3 APRIL 2024
WEATHER NEWS : ಮಲೆನಾಡು ಹೆಬ್ಬಾಗಿಲು ಶಿವಮೊಗ್ಗದಲ್ಲಿ ಬಿಸಲಿನ ಝಳ ಹೆಚ್ಚಲಿದೆ. ಉಷ್ಣಾಂಶ ಮತ್ತಷ್ಟು ಏರಿಕೆಯಾಗಲಿದೆ. ಇವತ್ತು ಜಿಲ್ಲೆಯಲ್ಲಿ ತಾಪಮಾನ 36.15 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಲಿದೆ ಎಂದು ಹಾವಮಾನ ಇಲಾಖೆಯ ವರದಿ ತಿಳಿಸಿದೆ.
ಬೆಳಗ್ಗೆ 6.30ರ ಹೊತ್ತಿಗೆ 22.16 ಡಿಗ್ರಿ ಸೆಲ್ಸೆಯಸ್ ಉಷ್ಣಾಂಶವಿರಲಿದೆ. ಬೆಳಗ್ಗೆ 10.30ರ ಹೊತ್ತಿಗೆ 31.63 ಡಿಗ್ರಿ ತಲುಪಲಿದೆ. ಮಧ್ಯಾಹ್ನ 1.30ರ ಹೊತ್ತಿಗೆ ತಾಪಮಾನ 35.88 ಡಿಗ್ರಿ ಉಷ್ಣಾಂಶಕ್ಕೆ ಏರಿಕೆಯಾಗಲಿದೆ. ಸಂಜೆ 4.30ಕ್ಕೆ 36.15 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ.
‘ಮಳೆ ಮುನ್ಸೂಚನೆ’ : ಹವಾಮಾನ ಇಲಾಖೆ
ಭಾರಿ ಬಿಸಿಲಿನಿಂದ ರಾಜ್ಯದ ಜನರು ಹೈರಾಣಾಗಿದ್ದಾರೆ. ಈ ಮಧ್ಯೆ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ. ಏಪ್ರಿಲ್ ತಿಂಗಳಲ್ಲಿ ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳೆನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಮಾರ್ಚ್ ತಿಂಗಳಲ್ಲಿ ವಿಪರೀತ ಬಿಸಿಲು, ಒಣ ಹವೆಯಿಂದ ಜನ, ಜಾನುವಾರುಗಳು ಕಂಗೆಟ್ಟಿದ್ದವು. ಏಪ್ರಿಲ್ ತಿಂಗಳಲ್ಲಿಯು ಒಣ ಹವೆ, ವಿಪರೀತಿ ಬಿಸಿಲು ಇರಲಿದೆ. ಆದರೆ ದಕ್ಷಿಣ ಒಳನಾಡಿನಲ್ಲಿ ಸಾಧಾರಣಕ್ಕಿಂತಲು ಕಡಿಮೆ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಸಾಧಾರಣಕ್ಕಿಂತಲು ತುಸು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಹಾಡು, ಡೈಲಾಗ್‌ಗೆ ಸೀಮತವಾಗದ ಶಿವಣ್ಣ, ಹಳೆ ಹೇಳಿಕೆಯ ವಿಡಿಯೋ ಟ್ರೋಲ್‌ನಿಂದ ಮುಜುಗರ
LATEST NEWS
- ದುರಸ್ತಿ ವೇಳೆ ಲೈನ್ ಮ್ಯಾನ್‌ಗೆ ಕರೆಂಟ್ ಶಾಕ್, ಸ್ಥಳದಲ್ಲೆ ಸಾವು

- ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

- ಉಪನ್ಯಾಸಕ ಸುರೇಶ್ ನಿಗೂಢ ಸಾವು ಕೇಸ್, ಶಿವಮೊಗ್ಗ SP ಫಸ್ಟ್ ರಿಯಾಕ್ಷನ್, ಏನಂದ್ರು?

- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

- ಟಾಟಾ ಏಸ್, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

About The Editor
ನಿತಿನ್ ಆರ್.ಕೈದೊಟ್ಲು
















