ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
HIGHLITE
- ಅರ್ಧ ಗಂಟೆ ಚರ್ಚಿಸಿದ ಕುಮಾರ್ ಬಂಗಾರಪ್ಪ, ರಾಘವೇಂದ್ರ
- ಸೊರಬದ ಕುಬಟೂರಿನ ಮನೆಯಲ್ಲಿ ರಾಜಕೀಯ ಚರ್ಚೆ
- ಎಂಎಲ್‌ಎ ಬಳಿಕ ಪಕ್ಷದ ಚಟುವಟಿಕೆಯಿಂದ ದೂರಾಗಿದ್ದ ಕುಮಾರ್
SHIVAMOGGA LIVE NEWS | 5 APRIL 2024
SORABA : ವಿಧಾನಸಭೆ ಚುನಾವಣೆ ಬಳಿಕ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.
ಸೊರಬದಲ್ಲಿರುವ ಕುಮಾರ್ ಬಂಗಾರಪ್ಪ ಅವರ ನಿವಾಸಕ್ಕೆ ಸಂಸದ ರಾಘವೇಂದ್ರ ಭೇಟಿ ನೀಡಿದ್ದರು. ಲೋಕಸಭೆ ಚುನಾವಣೆ, ಸಿದ್ಧತೆ ಮತ್ತು ಪ್ರಚಾರ ಕಾರ್ಯದ ಕುರಿತು ಇಬ್ಬರು ಚರ್ಚೆ ನಡೆಸಿದರು.
ಮತ್ತೆ ಆಕ್ಟೀವ್ ಆದ ಕುಮಾರ್
ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನಂತರ ಕಾರ್ಯಕರ್ತರ ಜೊತೆಗಿನ ಸಮಾಲೋಚನಾ ಸಭೆಯಲ್ಲಿ ಕುಮಾರ್ ಬಂಗಾರಪ್ಪ ಭಾಗವಹಿಸಿದ್ದರು. ಆ ಬಳಿಕ ಪಕ್ಷದ ಚುಟುವಟಿಕೆಯಿಂದ ದೂರ ಉಳಿದಿದ್ದರು. ಈಚೆಗೆ ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಭಾಗವಹಿಸಿದ್ದರು.
ಕುಮಾರ್ ಯಾಕಷ್ಟು ಮುಖ್ಯ?
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಪುತ್ರ ಮತ್ತು ಈಡಿಗ ಸಮುದಾಯದ ನಾಯಕ. ಕುಮಾರ್ ಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ಈ ಕಾರಣಕ್ಕೆ ಕುಮಾರ್ ಬಂಗಾರಪ್ಪ ಪ್ರಚಾರದ ಅಖಾಡಕ್ಕೆ ಧುಮುಕುವುದು ಬಿಜೆಪಿಗೆ ತುರ್ತು ಮತ್ತು ಅನಿವಾರ್ಯ. ಈಡಿಗ ಸಮುದಾಯದ ಬಹುಮತ ಗೀತಾ ಶಿವರಾಜ್ ಕುಮಾರ್ ಅವರತ್ತ ಹರಿದು ಹೋದರೆ ಬಿಜೆಪಿಗೆ ನಷ್ಟ. ಇದೇ ಕಾರಣಕ್ಕೆ ಚುನಾವಣೆ ಘೋಷಣೆ ಮೊದಲೆ ಬಿಜೆಪಿ ವತಿಯಿಂದ ಈಡಿಗ ಸಮುದಾಯದ ಸಮಾವೇಶ ನಡೆಸಲಾಗಿತ್ತು. ಮಾಜಿ ಸಚಿವ ಹಾಲಪ್ಪ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕುಮಾರ್ ಬಂಗಾರಪ್ಪ ಅವರು ಪ್ರಚಾರ ಆರಂಭಿಸಿದರೆ ಈಡಿಗ ಸಮುದಾಯದ ವಲಯದಲ್ಲಿ ಹೆಚ್ಚು ಜನರನ್ನು ಸುಲಭವಾಗಿ ತಲುಪಬಹುದಾಗಿದೆ ಎಂಬುದು ಬಿಜೆಪಿ ಲೆಕ್ಕಾಚಾರ.
ಕುಮಾರ್ ಬಂಗಾರಪ್ಪ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನಂತರ ಸೊರಬ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಗೆ ಇಬ್ಬರು ಒಂದೇ ಕಾರಿನಲ್ಲಿ ತೆರಳಿದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ್, ಮುಖಂಡರಾದ ಎಂ.ಡಿ.ಉಮೇಶ್, ಡಿ.ಆರ್.ಸುರೇಶ್, ಸುಧೀರ್ ಪೈ ಇದ್ದರು.
ಇದನ್ನೂ ಓದಿ – ಶಿವಮೊಗ್ಗದ ಸಂಸದನ ಆ ನಿರ್ಧಾರ ಸಾಮಾನ್ಯದ್ದಲ್ಲ, ಸಂಸತ್ ಇತಿಹಾಸದಲ್ಲೇ ಮೊದಲು, ಆಮೇಲೆ ಅವರು ಸಿಎಂ ಆದರು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422