ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ತಳ್ಳಿಕೊಂಡು ಹೋದ ಖದೀಮರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 15 APRIL 2024

SHIMOGA : ಮನೆಯೊಂದರ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿದೆ. ಬೆಳಗಿನ ಜಾವ ಬೈಕ್‌ ಅನ್ನು ಕಳ್ಳರು ತಳ್ಳಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಿವಮೊಗ್ಗದ ಹೆಚ್‌.ಸಿದ್ದಯ್ಯ ರಸ್ತೆಯ ಕೋರಿ ಪುಟ್ಟಪ್ಪನ ಕಾಂಪೌಂಡ್‌ನಲ್ಲಿ ಪ್ರವೀಣ್‌ ಎಂಬುವವರಿಗೆ ಸೇರಿದ ಹೀರೋ ಹೋಂಡಾ ಡ್ರೀಮ್‌ ಯುಗ ಬೈಕ್‌ ಕಳುವಾಗಿದೆ. ಈ ಭಾಗದಲ್ಲಿ ಬೈಕ್‌ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬೈಕ್‌ನ ಸುಳಿವು ಸಿಕ್ಕವರು ಮೊಬೈಲ್‌ ನಂಬರ್‌ 9353314090 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ – ಹೋಳಿಗೆ ಗೌರಮ್ಮ ಇನ್ನಿಲ್ಲ, ಶಿವಮೊಗ್ಗದಿಂದ ವಿದೇಶಕ್ಕೆ ಹೋಗುತ್ತಿತ್ತು ಇವರ ಹೋಳಿಗೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment