15 ವರ್ಷದ ಹಿಂದೆ ಮನೆ ಬಿಟ್ಟು ಬಂದ ವ್ಯಕ್ತಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸಾವು

SHIVAMOGGA LIVE NEWS | 18 APRIL 2024

SHIMOGA : ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತ ದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಆನವಟ್ಟಿ ಸಮೀಪದ ನೆರಲಗಿ ಗ್ರಾಮದ ಬಸವರಾಜ್ (40) ಮೃತರು. ಇವರು 15 ವರ್ಷದ ಹಿಂದೆ ಮನೆ ಬಿಟ್ಟು ಬಂದಿದ್ದರು ಎನ್ನಲಾಗಿದೆ. ಮಾ.28ರಂದು ಅಸ್ವಸ್ಥಗೊಂಡಿದ್ದ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ತಮ್ಮ ಊರಿನ ವಿವರ ತಿಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಾಗಿದೆ. ವಾರಸುದಾರರು ತುಂಗಾನಗರ ಠಾಣೆ (ಮೊ. 9480803377)ಯನ್ನು ಸಂಪರ್ಕಿಸಬಹುದು.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ ಮೊಳಗಿತು ಜೈ ಶ್ರೀರಾಮ್‌ ಘೋಷಣೆ, ಎಲ್ಲೆಲ್ಲಿ ಹೇಗಿತ್ತು ರಾಮನವಮಿ ಪೂಜೆ?

Tunga-Nagara-Police-Station-Shimoga

Leave a Comment