ಶಿವಮೊಗ್ಗದಲ್ಲಿ ರಾತ್ರಿ ಇಡೀ ಮಳೆ, ಗುಡುಗು, ಮಿಂಚಿನ ಆರ್ಭಟ, ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಮಳೆಯಾಗುತ್ತಿದೆ?

SHIVAMOGGA LIVE NEWS | 20 APRIL 2024 (ಈ ಸುದ್ದಿಯನ್ನು ಇನ್ನು 35 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

RAIN REPORT : ಜಿಲ್ಲೆಯಾದ್ಯಂತ ರಾತ್ರಿಯಿಂದ ಗುಡುಗ ಸಹಿತ ನಿರಂತರವಾಗಿ ಜೋರು ಮಳೆಯಾಗುತ್ತಿದೆ. ಇದರಿಂದ ತಾಪಮಾನ ತಗ್ಗಿದ್ದು , ವಾತಾವರಣ ತಂಪಾಗಿದೆ. ಶುಕ್ರವಾರ ಸಂಜೆ ಕೆಲವು ಹೊತ್ತು ಜೋರು ಮಳೆಯಾಗಿತ್ತು. ಆದರೆ ಮಧ್ಯರಾತ್ರಿಯಿಂದ ಮಳೆ ಅಬ್ಬರ ಜೋರಾಗಿದೆ. ಗುಡುಗು, ಮಿಂಚು ಕೂಡ ಹೆಚ್ಚಾಗಿದೆ.

ತೀರ್ಥಹಳ್ಳಿಯಲ್ಲಿ ಬೆಳಗಿನ ಜಾವದಿಂದ ಮಳೆಯಾಗುತ್ತಿದೆ. ಇನ್ನು ಕೆಲವು ಹೊತ್ತು ಮಳೆಯಾಗುವ ಸಾಧ್ಯತೆ ಇದೆ. ಮತ್ತೆ ಮಧ್ಯಾಹ್ನದ ವೇಳೆ ಪುನಃ ಮಳೆ ಮುಂದುವರೆಯುವ ಸಂಭವವಿದೆ. ಹೊಸನಗರದಲ್ಲಿಯು ಮಳೆಯಾಗುತ್ತಿದೆ. ಸಂಜೆ ಪುನಃ ಮಳೆ ಮುಂದುವರೆಯುವ ಸಂಭವವಿದೆ. ಸಾಗರ, ಸೊರಬ, ಭದ್ರಾವತಿ, ಶಿಕಾರಿಪುರದಲ್ಲಿಯು ಗುಡುಗು ಸಹಿತ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಎಲ್ಲೆಡೆ ವಾತಾವರಣ ತಂಪಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ – ಶಿವಮೊಗ್ಗ ಸದ್ಯಕ್ಕೆ ಕೂಲ್‌, ಇಡೀ ದಿನ ಮುಂದುವರೆಯಲಿದೆ ಮಳೆ, ಇವತ್ತು ಎಷ್ಟು ತಾಪಮಾನವಿರುತ್ತೆ?

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Rainfall-near-Bhadra-Dam-in-Singanamane-Village-in-Bhadravathi

Leave a Comment