ಮೂಲೆಗದ್ದೆ ಮಠ ಬಸ್‌ ಸ್ಟಾಪ್‌ ಬಳಿ ಹಿಟ್‌ ಅಂಡ್‌ ರನ್‌ ಅಪಘಾತ, ಹೇಗಾಯ್ತು ಘಟನೆ?

SHIVAMOGGA LIVE NEWS | 20 APRIL 2024

HOSANAGARA : ಮದುವೆ ಸಮಾರಂಭಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರರಿಗೆ ಪಿಕಪ್‌ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದಾರೆ. ಡಿಕ್ಕಿ ಹೊಡೆದ ಪಿಕಪ್‌ ವಾಹನ ನಿಲ್ಲಿಸಿದೆ ಪರಾರಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಟ್ಟೆಮಲ್ಲಪ್ಪ – ಹೊಸನಗರ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಸಾಗರದ ಬಡಿಯಪ್ಪ ಮತ್ತು ಹೊಸನಗರದ ಬಿಲಗೋಡಿನ ದಾನಪ್ಪ ಗಾಯಗೊಂಡಿದ್ದಾರೆ. ಮುಂಬಾರಿನಲ್ಲಿ ಸಂಬಂಧಿಯ ಮದುವೆಗೆ ಇಬ್ಬರು ಬೈಕ್‌ನಲ್ಲಿ ತೆರಳುತ್ತಿದ್ದರು. ಮೂಲೆಗದ್ದೆ ಮಠ ಬಸ್‌ ನಿಲ್ದಾಣದ ಬಳಿ ಹಿಂಬದಿಯಿಂದ ಬಂದ ಪಿಕಪ್‌ ವಾಹನ ಡಿಕ್ಕಿ ಹೊಡೆದು ತೆರಳಿದೆ. ಗಾಯಾಳುಗಳಿಗೆ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಡಿವೈಡರ್‌ ಬಳಿ ನಿಂತಿದ್ದ ಬೈಕ್‌ಗೆ ಕಾರು ಡಿಕ್ಕಿ, ಸವಾರನ ಮೂಳೆಗಳು ಕಟ್

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment