ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 24 APRIL 2024
SHIMOGA : ಆಭರಣದ ಅಂಗಡಿಗೆ ಬಂದಿದ್ದ ಇಬ್ಬರು ಮಹಿಳೆಯರು 21 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ಮಾಡಿದ್ದಾರೆ. ಅಂಗಡಿಯಲ್ಲಿ ಸ್ಟಾಕ್ ಚೆಕ್ ಮಾಡುವಾಗ ಘಟನೆ ಬೆಳಕಿಗೆ ಬಂದಿದೆ. ಸಿಸಿಟಿವಿ ಪರಿಶೀಲಿಸಿದಾಗ ಮಹಿಳೆಯರು ಚಿನ್ನದ ಸರ ಕಳವು ಮಾಡಿರುವುದು ಸ್ಪಷ್ಟವಾಗಿದೆ.
ಸರ ಕೇಳಿದರು, ಮೂಗುತಿ ಖರೀದಿಸಿದರು
ಗಾಂಧಿ ಬಜಾರ್ನ ಜುವೆಲ್ಲರಿ ಅಂಗಡಿಯೊಂದರಲ್ಲಿ ಚಿನ್ನದ ಸರ ಖರೀದಿಗೆ 60 ವರ್ಷ ಮತ್ತು 30 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಬಂದಿದ್ದರು. ಅಂಗಡಿ ಮಾಲೀಕ ಲೋಕೇಶ್ ಅವರು ಮಹಿಳೆಯರಿಗೆ ಚಿನ್ನದ ಸರವಿದ್ದ ಟ್ರೇ ತೆಗೆದು ತೋರಿಸುತ್ತಿದ್ದರು. ಈ ವೇಳೆ ಮತ್ತೊಬ್ಬ ಗ್ರಾಹಕರು ಬಂದಿದ್ದು ಮಾಲೀಕ ಲೋಕೇಶ್ ಅವರತ್ತ ಗಮನ ಹರಿಸಿದರು. ಈ ಸಂದರ್ಭ ಇಬ್ಬರು ಮಹಿಳೆಯರು ಚಿನ್ನದ ಸರ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸರ ಖರೀದಿಗೆ ಬಂದ ಮಹಿಳೆಯರು ಕೊನೆಗೆ ಮೂಗುತಿ ಖರೀದಿಸಿ ತೆರಳಿದ್ದರು.
ಸ್ಟಾಕ್ ಚೆಕ್, ಸಿಸಿಟಿವಿ ಪರಿಶೀಲನೆ
ಎರಡು ದಿನದ ಬಳಿಕ ಅಂಗಡಿಯ ಸ್ಟಾಕ್ ಚೆಕ್ ವೇಳೆ ಟ್ರೇನಲ್ಲಿ ಚಿನ್ನದ ಸರ ನಾಪತ್ತೆಯಾಗಿದ್ದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಸಿಸಿಟಿವಿ ಪರಿಶೀಲಿಸಿದಾಗ ಅಂಗಡಿಗೆ ಬಂದಿದ್ದ ಇಬ್ಬರು ಮಹಿಳೆಯರು 1.50 ಲಕ್ಷ ರೂ. ಮೌಲ್ಯದ 21.830 ಗ್ರಾಂ ತೂಕದ ಬಂಗಾರದ ಸರ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಜುವೆಲ್ಲರಿ ಶಾಪ್ನ ಮಾಲೀಕ ಲೋಕೇಶ್ ಅವರು ಕೋಟೆ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಚುನಾವಣೆಗೆ ಜೊಮ್ಯಾಟೋ ಡೆಲಿವರಿ ಬಾಯ್, ಡ್ರೈವರ್, ಕೂಲಿ ಕಾರ್ಮಿಕ ಸ್ಪರ್ಧೆ, ಇಲ್ಲಿದೆ ಅಭ್ಯರ್ಥಿಗಳ ಹಿನ್ನೆಲೆ
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






