ಬಟ್ಟೆ ಖರೀದಿಸಿ ಕಾರ್‌ ಬಳಿ ಬಂದ ಕುಟುಂಬಕ್ಕೆ ಆಘಾತ, ಒಳ ನೋಡಿದಾಗ ಕಾದಿತ್ತು ಶಾಕ್

SHIVAMOGGA LIVE NEWS | 29 APRIL 2024

SHIMOGA : ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಓಮ್ನಿ ಕಾರಿನ ಗಾಜು ತೆಗೆದು ಸೀಟಿನ ಕೆಳಗಿದ್ದ ವ್ಯಾನಿಟಿ ಬ್ಯಾಗ್‌ ಕಳ್ಳತನ ಮಾಡಲಾಗಿದೆ.‌ ಅದರಲ್ಲಿ ಚಿನ್ನಾಭರಣ, ಮೇಕಪ್‌ ಕಿಟ್‌ ಇತ್ತು ಆರೋಪಿಸಲಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್‌ನ ಚೋರ್‌ ಬಜಾರ್‌ನಲ್ಲಿ ಘಟನೆ ಸಂಭವಿಸಿದೆ.

ಚನ್ನಗಿರಿ ತಾಲೂಕು ಕೆರೆಬಿಳಚಿ ಗ್ರಾಮದ ಇಸ್ಮಾಯಿಲ್‌ ಜಬೀವುಲ್ಲಾ ಎಂಬುವವರು ತಮ್ಮ ಕುಟುಂಬದೊಂದಿಗೆ ಚೋರ್‌ ಬಜಾರ್‌ಗೆ ಬಟ್ಟೆ ಖರೀದಿಗೆ ಬಂದಾಗ ಘಟನೆ ಸಂಭವಿಸಿದೆ. ಚೋರ್‌ ಬಜಾರ್‌ ಸಮೀಪ ರಸ್ತೆಯಲ್ಲಿ ಓಮ್ನಿ ಕಾರು ನಿಲ್ಲಿಸಿದ್ದರು. ಬಟ್ಟೆ ಖರೀದಿಸಿ ಹಿಂತಿರುಗಿದಾಗ, ಓಮ್ನಿ ಕಾರಿನ ಗಾಜಿನ ತೆರೆದು ಕಳ್ಳತನ ಮಾಡಿರುವುದು ಗೊತ್ತಾಗಿದೆ.

ವ್ಯಾನಿಟಿ ಬ್ಯಾಗ್‌ನಲ್ಲಿ ಚಿನ್ನದ ಸರ, ಕಿವಿಯೋಲೆ, ಉಂಗುರ, ಒಂದು ಮೇಕಪ್‌ ಕಿಟ್‌ ಇತ್ತು ಆರೋಪಿಸಲಾಗಿದೆ. ಇವುಗಳ ಒಟ್ಟು ಮೌಲ್ಯ 2.12 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

Kalleshwara-Enterprises.webp

ಇದನ್ನೂ ಓದಿ – ಶಿವಮೊಗ್ಗ ಕಣಕ್ಕೆ ಇವತ್ತಿನಿಂದ ಘಟಾನುಘಟಿ ನಾಯಕರ ಎಂಟ್ರಿ, ಸಾಲು ಸಾಲು ಸಿನಿಮಾ ಸ್ಟಾರ್‌ಗಳು ಭೇಟಿ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment