ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 MAY 2024
SHIMOGA : ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯ ಚಿನ್ನ ಸರ ಕಳ್ಳತನವಾಗಿದೆ. ಕಸ್ತೂರ ಬಾ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಶಿಕಾರಿಪುರ ತಾಲೂಕು ತಾಳಗುಂದದ ಸಿಂಚನಾ ಬ್ಯಾಗಿನಲ್ಲಿಟ್ಟಿದ್ದ ಚಿನ್ನದ ಸರ ನಾಪತ್ತೆಯಾಗಿದೆ. ಅಂದಾಜು 44 ಸಾವಿರ ರೂ. ಮೌಲ್ಯದ 10 ಗ್ರಾಂ ತೂಕದ ಸರ ಕಳುವಾಗಿದೆ ಎಂದು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ.18 ಮತ್ತು 19ರಂದು ಶಿವಮೊಗ್ಗದ ಪರೀಕ್ಷಾ ಕೇಂದ್ರದಲ್ಲಿ ಸಿಂಚನಾ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದಳು. ಪರೀಕ್ಷಾ ಕೊಠಡಿಯೊಳಗೆ ಸರ ಸೇರಿದಂತೆ ಯಾವುದೇ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ ಎಂಬ ನಿಯಮವಿದೆ. ಆದ್ದರಿಂದ ತನ್ನ ಕೊರಳಲ್ಲಿದ್ದ ಚಿನ್ನದ ಸರ ತೆಗೆದು ಬ್ಯಾಗಿನಲ್ಲಿ ಇಟ್ಟಿದ್ದಳು. ಎಲ್ಲ ವಿದ್ಯಾರ್ಥಿಗಳು ಬ್ಯಾಗ್ ಇಟ್ಟಿದ್ದ ಸ್ಥಳದಲ್ಲೇ ತನ್ನ ಬ್ಯಾಗ್ ಇಟ್ಟಿದ್ದಳು. ಏ.19 ರಂದು ಪರೀಕ್ಷೆ ಮುಗಿಸಿ ಬಂದು ಬ್ಯಾಗಿನಲ್ಲಿ ಪರಿಶೀಲಿಸಿದಾಗ ಚಿನ್ನದ ಸರವಿರಲಿಲ್ಲ. ಪೋಷಕರಿಗೆ ವಿಷಯ ತಿಳಿಸಿ ತಡವಾಗಿ ದೂರು ನೀಡಿದ್ದಾರೆ.
ಇದನ್ನೂ ಓದಿ – ತ್ಯಾಗರ್ತಿಯಲ್ಲಿ ನಟ ದುನಿಯಾ ವಿಜಯ್, ಶಿವರಾಜ್ ಕುಮಾರ್ ಅಬ್ಬರದ ಪ್ರಚಾರ, ಏನೇನು ಹೇಳಿದರು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422