ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 4 MAY 2024
ELECTION NEWS : ‘ಶಿವಮೊಗ್ಗ ಕ್ಷೇತ್ರಕ್ಕೆ ಸಂಸದ ರಾಘವೇಂದ್ರ ಅವರ ಕೊಡುಗೆ ಏನು? ದಮ್ಮ, ತಾಖತ್ತು ಇದ್ದರೆ ಅವರ ಕೊಡುಗೆ ಹೇಳಲಿ. 15 ವರ್ಷ ಸಂಸದರಾಗಿ ಏನು ಕಡಿದು ಕಟ್ಟೆ ಹಾಕಿದ್ದಾರೆ?ʼ. ಹೀಗಂತ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ರಾಘವೇಂದ್ರ ಅವರು ಲೋಕಸಭೆಯಲ್ಲಿ ರೈತರ ಪರ ಎಂದೂ ಪ್ರಶ್ನಿಸಿಲ್ಲ. ರಾಘವೇಂದ್ರ ಅವರ ತೋಟ, ಮನೆಯಲ್ಲಿ ಕೆಲಸ ಮಾಡುವವರಿಗು ಗ್ಯಾರಂಟಿ ಯೋಜನೆ ತಲುಪಿದೆ. ಈ ಬಾರಿ ಅವರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಿದ್ದಾರೆ ಎಂದು ತಿಳಿಸಿದರು.
ಅಣ್ಣಾಮಲೈ ಜೊತೆ ಚರ್ಚೆಗೆ ರೆಡಿ
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಸಂಸದರ ಅಭೀವೃದ್ಧಿ ಕುರಿತು ಎಂದಿಗು ಮಾತನಾಡುವುದಿಲ್ಲ. ಪ್ರಧಾನಿ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಸಚಿವ ಸಂತೋಷ್ ಲಾಡ್ ಅವರು ಕೇಳಿದ ಪ್ರಶ್ನೆಗೆ ಅಣ್ಣಾಮಲೈ ಅವರು ನಮ್ಮ ಪಕ್ಷದ ವಕ್ತಾರರು ಉತ್ತರಿಸುತ್ತಾರೆ ಎಂದಿದ್ದಾರೆ. ಮೇ 7ರ ಒಳಗೆ ಅಣ್ಣಾಮಲೈ ಅವರು ಎಲ್ಲಿಯೇ ಚರ್ಚೆಗೆ ಕರೆದರು ನಾನು ಚರ್ಚೆಗೆ ಸಿದ್ದ ಎಂದು ಸವಾಲು ಹಾಕಿದರು.
ಬಂಗಾರಪ್ಪ ಅವರ ಹೆಸರಿಲ್ಲದೆ ಶಿವಮೊಗ್ಗದ ಚರಿತ್ರೆ ಬರೆಯಲು ಸಾಧ್ಯವಿಲ್ಲ. ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಗೆಲುವಾಗಲಿದೆ. ಕ್ರಮ ಸಂಖ್ಯೆ 1 ಬಂದಾಗಲೆ ಗೀತಾ ಗೆಲ್ಲುತ್ತಾರೆ ಅನ್ನುವುದು ನಿಶ್ಚಿತವಾಯಿತು. ನಮ್ಮ ಕ್ಷೇತ್ರದಲ್ಲಿ ನನ್ನ ಕ್ರಮ ಸಂಖ್ಯೆಯೂ 1 ಇತ್ತು ಎಂದು ತಿಳಿಸಿದರು.
ಸಚಿವ ಮಧು ಬಂಗಾರಪ್ಪ, ಚುನಾವಣೆ ಉಸ್ತುವಾರಿ ಅನಿಲ್ ತಡಕಲ್, ಚಂದ್ರಭೂಪಾಲ್, ಜಿ.ಡಿ.ಮಂಜುನಾಥ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ – ಲೋಕಸಭೆ ಚುನಾವಣೆ ಮಧ್ಯೆ ಶಿವಮೊಗ್ಗದಲ್ಲಿ ಮತ್ತೊಂದು ಚುನಾವಣೆಗೆ ಸಿದ್ಧತೆ, ಮೇ 9ಕ್ಕೆ ಅಧಿಸೂಚನೆ
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






