ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 5 MAY 2024
SAGARA : ಶೆಡ್‌ನಲ್ಲಿ ಇರಿಸಿದ್ದ ಅಡಿಕೆ ಕಳ್ಳತನವಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಪ್ರಕರಣ 1 : ನಾಡಕಲಸೆ, ಸಾಗರ
ನಾಡಕಲಸೆ ಗ್ರಾಮದ ಪ್ರವೀಣ್ ಎಂಬುವವರು ಅಡಿಕೆ ಸಿಪ್ಪೆ ಬಿಡಿಸಿ ಕೊಡುವ ವ್ಯವಹಾರ ನಡೆಸುತ್ತಿದ್ದಾರೆ. ಅಡಿಕೆ ವ್ಯಾಪಾರಿ ಸುಹೇಲ್ ಅಹಮದ್ ಎಂಬುವವರು ಸಿಪ್ಪೆ ಬಿಡಿಸಿ ಕೊಡುವಂತೆ 150 ಚೀಲ ಅಡಿಕೆ ತಂದಿದ್ದರು. ಪ್ರವೀಣ್ ಅವರು ತಮ್ಮ ಮನೆಯ ಗೋಡೋನ್‌ನಲ್ಲಿ ಇರಿಸಿದ್ದರು. ಏ.25ರಂದು ಬೆಳಗ್ಗೆ ಗೋಡನ್‌ಗೆ ಬಂದಾಗ 38 ಕೆ.ಜಿ. ತೂಕದ 18 ಚೀಲ ಸಿಪ್ಪೆಗೋಟು ಕಳ್ಳತನವಾಗಿತ್ತು. ಇದರ ಮೌಲ್ಯ 1.33 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಪ್ರಕರಣ 2 : ಮಿಟ್ಲಕೊಪ್ಪ, ಮಾಲ್ವೆ, ಸಾಗರ
ಸಾಗರ ತಾಲೂಕು ಮಿಟ್ಲಕೊಪ್ಪದ ನಾಗರಾಜ ಎಂಬುವವರ ಮನೆಯ ಪಕ್ಕದ ಗೋಡೋನ್‌ನಲ್ಲಿ ಅಡಿಕೆ ಸಂಗ್ರಹಿಸಿದ್ದರು. ಏ.26ರಂದು ಬೆಳಗ್ಗೆ ಗೋಡೊನ್‌ಗೆ ಬಂದು ನೋಡಿದಾಗ ಎರಡು ಚೀಲ ಕೆಂಪು ಅಡಿಕೆ, ಮೂರು ಚೀಲ ಸಿಪ್ಪೆಗೋಟು ಅಡಿಕೆ ಕಳ್ಳತನವಾಗಿದೆ. ಇದರ ಮೌಲ್ಯ 70 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಹಿರಂಗ ಪ್ರಚಾರ ಇವತ್ತೇ ಕೊನೆ, ಯಾವ್ಯಾವ ಅಭ್ಯರ್ಥಿಯ ಪ್ರಚಾರ ಹೇಗಿದೆ? ಇಲ್ಲಿದೆ ಡಿಟೇಲ್ಸ್
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






