ಶಿವಮೊಗ್ಗದಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಡೀ ದಿನದ ಹವಾಮಾನ ವರದಿ

SHIVAMOGGA LIVE NEWS | 10 MAY 2024

WEATHER REPORT : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗುರುವಾರ ಮಳೆಯಾಗಿದೆ. ಆದರೂ ಶಕೆ ಮತ್ತು ಧಗೆ ಮುಂದುವರೆದಿದೆ. ಇವತ್ತು ಜಿಲ್ಲೆಯಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ 25 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಇಡೀ ದಿನದ ತಾಪಮಾನ

ಬೆಳಗ್ಗೆ 7 ಗಂಟೆಗೆ 25 ಡಿಗ್ರಿ ಸೆಲ್ಸಿಯಸ್.‌ ಬೆಳಗ್ಗೆ 9ಕ್ಕೆ 30.2 ಡಿಗ್ರಿ, ಬೆಳಗ್ಗೆ 11ಕ್ಕೆ 34.8 ಡಿಗ್ರಿ, ಮಧ್ಯಾಹ್ನ 1 ಗಂಟೆಗೆ 37 ಡಿಗ್ರಿ, ಮಧ್ಯಾಹ್ನ 3ಕ್ಕೆ 35.6 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಸಂಜೆ 5 ಗಂಟೆಗೆ 25.5 ಡಿಗ್ರಿ, ಸಂಜೆ 7ಕ್ಕೆ 26.4 ಡಿಗ್ರಿ, ರಾತ್ರಿ 10 ಗಂಟೆಗೆ 25.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಿದೆ.

ಹಗುರದಿಂದ ಸಾಧಾರಣ ಮಳೆ

ಜಿಲ್ಲೆಯಲ್ಲಿ ಇವತ್ತು ಹಗುರದಿಂದ ಸಾಧಾರಣೆ ಮಳೆಯಾಗುವ ಸಂಭವವಿದೆ. ಸಂಜೆ 4 ಗಂಟೆಯಿಂದ 7 ಗಂಟೆ ಮಧ್ಯೆ ಅಲ್ಲಲ್ಲಿ ಮಳೆಯಾಗಲಿದೆ. ಉಳಿದ ಸಂದರ್ಭ ಒಣ ಹವೆ ಮುಂದುವರೆಯಲಿದೆ.

Kalleshwara-Enterprises.webp

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ, ವಿದ್ಯಾರ್ಥಿನಿಯರದ್ದೇ ಮೇಲುಗೈ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment