ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 MAY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲೆಗೆ ಟಪರ್ ಶಿವಮೊಗ್ಗದ ವಿನೀತ್ ರಾವ್
EDUCATION NEWS : ನಿದಿಗೆಯ ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕೆ.ಎನ್.ವಿನೀತ್ ರಾವ್ CBSC 10ನೇ ತರಗತಿ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪರ್ (Topper) ಆಗಿದ್ದಾರೆ. ಶೇ.98.6ರಷ್ಟು ಅಂಕ ಪಡೆದಿದ್ದಾರೆ. ಕಳೆದ 5 ವರ್ಷದಿಂದ ಜೈನ್ ಪಬ್ಲಿಕ್ ಶಾಲೆ ಶೇ.100ರಷ್ಟು ಫಲಿತಾಂಶ ಪಡೆದಿದೆ. ಪ್ರಾಂಶುಪಾಲರದ ಪ್ರಿಯದರ್ಶಿನಿ.ಎನ್, ಸಿಒಒ ಸಮಂತ್.ಆರ್ , ಪೋಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವಿನೀತ್ ರಾವ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ವಿವೇಕಾನಂದ ಲಯನ್ಸ್ ಪಿಯು ಕಾಲೇಜು ಆರಂಭ
EDUCATION NEWS : ಹೊಳೆಹೊನ್ನೂರಿನ ವಿವೇಕಾನಂದ ಲಯನ್ಸ್ ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ಪ್ರಸಕ್ತ ಸಾಲಿನಿಂದ ವಿವೇಕಾನಂದ ಲಯನ್ಸ್ ಪದವಿ ಪೂರ್ವ ಕಾಲೇಜನ್ನು ಆರಂಭಿಸಲಾಗುತ್ತಿದೆ ಟ್ರಸ್ಟ್ ಅಧ್ಯಕ್ಷ ಎಂದು ಜಿ.ಆರ್.ಸೀತಾರಾಮ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರು ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, 1986ರಿಂದ ಸ್ಥಾಪನೆಗೊಂಡ ವಿವೇಕಾನಂದ ವಿದ್ಯಾವರ್ಧಕ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡುತ್ತಾ ಸದುದ್ದೇಶದಿಂದ 1987ರಲ್ಲಿ ನರ್ಸರಿಯಿಂದ ಪ್ರಾಥಮಿಕ ಶಾಲೆ ಆರಂಭಿಸಿತು ಎಂದು ತಿಳಿಸಿದರು.
ಇದನ್ನೂ ಓದಿ – ಮುಂಗಾರು ಮಳೆ ಪ್ರವೇಶದ ದಿನಾಂಕ ಪ್ರಕಟಿಸಿದ ಹವಾಮಾನ ಇಲಾಖೆ, ರೈತರಿಗೆ ನೆಮ್ಮದಿ
ಇವತ್ತಿನಿಂದ ಅಂತಾರಾಷ್ಟ್ರೀಯ ಸಮ್ಮೇಳನ
EDUCATION NEWS : ಪಿಇಎಸ್ ತಾಂತ್ರಿಕ ಮತ್ತು ನಿರ್ವಹಣಾ ಕಾಲೇಜಿನಿಂದ ಮೇ 16, 17ರಂದು ಇಂಜಿನಿಯರಿಂಗ್, ಆರೋಗ್ಯ ಕ್ಷೇತ್ರ ಒಟ್ಟಾಗಿ ಸಾಗುವುದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಎಂಎಟಿಹೆಚ್ 2024 ಸಮ್ಮೇಳನ ಏರ್ಪಡಿಸಲಾಗಿದೆ. ಜಗತ್ತಿನಾದ್ಯಂತ ಸಂಪನ್ಮೂಲ ವ್ಯಕ್ತಿಗಳನ್ನು ಒಂದೆಡೆ ಸೇರಿಸಲಾಗುತ್ತದೆ. ಸುಮಾರು 200 ಪ್ರಬಂಧಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪಿಇಎಸ್ ಟ್ರಸ್ಟ್‌ನ ಡಾ. ಆರ್.ನಾಗರಾಜ್ ತಿಳಿಸಿದ್ದಾರೆ.