ಕುಂಸಿಯಿಂದ ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲದ ಅಡುಗೆ ಭಟ್ಟರಿಗೆ ಫೋನ್‌, ಕಾದಿತ್ತು ಶಾಕಿಂಗ್‌ ನ್ಯೂಸ್‌

SHIVAMOGGA LIVE NEWS | 17 MAY 2024

SHIMOGA : ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಿಟಕಿ ಗಾಜು ಒಡೆದು, ಮುಂಬಾಗಿಲಿನ ಬೀಗ ಮೀಟಿ ಬೀರುವಿನಲ್ಲಿದ್ದ ನಗದು, ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ತಾಲೂಕು ಬೈರನಕೊಪ್ಪ ಗ್ರಾಮದ ವಾಮನ ರಾವ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ.

ವಾಮನರಾವ್‌ ಅವರು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಅಡುಗೆ (Cook) ಕೆಲಸ ಮಾಡುತ್ತಿದ್ದಾರೆ. ಅವರ ತಾಯಿ ಮಾತ್ರ ಬೈರನಕೊಪ್ಪದಲ್ಲಿ ಇದ್ದರು. ಈಚೆಗೆ ಅವರನ್ನು ಗೊರವನಹಳ್ಳಿಗೆ ಕರೆಯಿಸಿಕೊಂಡಿದ್ದರು. ಪರಿಚಯದ ಒಬ್ಬರನ್ನು ಆಗಾಗ ಮನೆ ಬಳಿ ಬಂದು ನೋಡಿಕೊಂಡು ಹೋಗುವಂತೆ ತಿಳಿಸಿದ್ದರು. ಅಂತೆಯೆ ಅವರು ಮನೆ ಬಳಿ ಬಂದಾ ಕಳ್ಳತನವಾಗಿರುವುದು ಗೊತ್ತಾಗಿದೆ.

ಇದನ್ನೂ ಓದಿ – ನಕ್ಸಲರ ಶರಣಾಗತಿಗೆ ಸರ್ಕಾರದ ಸಮಿತಿ, ಶಿವಮೊಗ್ಗದಲ್ಲಿ ಮೊದಲ ಸುದ್ದಿಗೋಷ್ಠಿ, ಏನೆಲ್ಲ ಹೇಳಿದರು?

ಪರಿಚಯದವರು ಕರೆ ಮಾಡಿದ ಕೂಡಲೆ ವಾಮನರಾವ್‌ ಅವರು ಬೈರನಕೊಪ್ಪದ ಮನೆಗೆ ಬಂದು ಪರಿಶೀಲಿಸಿದರು. ಮನೆಯಲ್ಲಿದ್ದ ಬೀರುವಿನಲ್ಲಿ 1 ಲಕ್ಷ ರೂ. ನಗದು, ಮೂರು ಬೆಳ್ಳಿ ಬಟ್ಟಲು, ಓಲೆ ಸೇರಿದ ಒಟ್ಟು 1.09 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime-News-General-Image

Leave a Comment