ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 MAY 2024
BHADRAVATHI : ಗದಗ ಮತ್ತು ಹಾವೇರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ತುಂಗಭದ್ರಾ ನದಿಯನ್ನೇ ಅವಲಂಬಿಸಿರುವವರಿಗಾಗಿ ಭದ್ರಾ ಜಲಾಶಯದಿಂದ (Bhadra Dam) 1 ಟಿಎಂಸಿ ನೀರು ಹರಿಸಲಾಗುತ್ತದೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಹೇಗಿರುತ್ತೆ ಮಳೆ? ಎಷ್ಟಿರುತ್ತೆ ತಾಪಮಾನ? ಇಲ್ಲಿದೆ ಇಡೀ ದಿನದ ಹವಾಮಾನ ವರದಿ
ತುಂಗಭದ್ರಾ ನದಿ ದಂಡೆಯಲ್ಲಿರುವ ನಗರ ಮತ್ತು ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವ ಕಾಣಿಸಿಕೊಂಡಿರುವ ಈ ಹಿನ್ನೆಲೆ ನೀರು ಹರಿಸಲಾಗುತ್ತಿದೆ. ಮೇ 22ರ ರಾತ್ರಿಯಿಂದ 28ರ ವರೆಗೆ ತಲಾ 2 ಸಾವಿರ ಕ್ಯೂಸೆಕ್ನಂತೆ ಕಡೇ ದಿನ 1574 ಕ್ಯೂಸೆಕ್ ಮಾತ್ರ ಹರಿಸಲಾಗುತ್ತದೆ. ಒಟ್ಟು 11,574 ಕ್ಯೂಸೆಕ್ (1ಟಿಎಂಸಿ) ಹರಿಸಲಾಗುತ್ತದೆ ಎಂದು ಭದ್ರಾ ಯೋಜನಾ ವೃತ್ತದ ಪ್ರಕಟಣೆ ತಿಳಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422