ಆಯನೂರು ಬಳಿ ಮುಖಾಮುಖಿ ಡಿಕ್ಕಿ, ಒಬ್ಬನ ಕಾಲು ಕಟ್‌, ಹೇಗಾಯ್ತು ಘಟನೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 24 MAY 2024

AYANURU : ಓಮ್ನಿ ಕಾರು ಮತ್ತು ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಓಮ್ನಿಯಲ್ಲಿದ್ದ ಪ್ರಯಾಣಿಕನ ಎರಡೂ ಕಾಲುಗಳು ತುಂಡಾಗಿವೆ. ಆಯನೂರು ಸಮೀಪದ ಡಾಂಬರ್ ಫ್ಯಾಕ್ಟರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ  (Highway) ಘಟನೆ ಸಂಭವಿಸಿದೆ.

ಇದನ್ನೂ ಓದಿ – ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಶಿವಮೊಗ್ಗದ ಆಸ್ಪತ್ರೆಗೆ ದಾಖಲು

ಓಮ್ನಿಯಲ್ಲಿದ್ದ ಕರುಣಾಕರ ಎಂಬುವವರ ಕಾಲುಗಳು ತುಂಡಾಗಿವೆ. ಮಲ್ಲಿಕಾರ್ಜುನ, ದರ್ಶನ್ ಎಂಬುವರಿಗೆ ಗಾಯಗಳಾಗಿವೆ. ಇವರು ಶಿವಮೊಗ್ಗದಿಂದ ಹೊಸನಗರಕ್ಕೆ ಕೆಲಸಕ್ಕೆ ತೆರಳುತ್ತಿದ್ದರು. ಗೂಡ್ಸ್‌ ವಾಹನ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಚಾಲಕ ಶಾಬಾದ್‌ ಖಾನ್‌ ತಲೆ ಹಾಗೂ ಕುತ್ತಿಗೆಗೆ ಗಾಜುಗಳು ಚುಚ್ಚಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment