ಕೃಷಿ ಹೊಂಡದಲ್ಲಿ ಬಿದ್ದ ಬಾಲಕನ ರಕ್ಷಣೆಗೆ ಧಾವಿಸಿದ ಯುವಕ, ಇಬ್ಬರು ಸಾವು, ಹೇಗಾಯ್ತು ಘಟನೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 24 MAY 2024

AYANURU : ಕೃಷಿ ಹೊಂಡದಲ್ಲಿ (Farm Pond) ಮುಳುಗಿ ಇಬ್ಬರು ಸಾವಿಗೀಡಾಗಿದ್ದಾರೆ. ಆಯನೂರು ಸಮೀಪದ ಚೆನ್ನಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ಮಹೇಶ್ ಅವರ ಪುತ್ರ ಅಭಯ್ (16), ಮಾಲತೇಶ್ (28) ಮೃತ ದುರ್ದೈವಿಗಳು.

ಅಭಯ್
ಅಭಯ್‌

ಗ್ರಾಮದಲ್ಲಿ ಜಮೀನಿನಲ್ಲಿ ಟ್ರ್ಯಾಕ್ಟರ್‌ನಲ್ಲಿ ಮಾಲತೇಶ್ ಉಳುಮೆ ಮಾಡುತ್ತಿದ್ದ. ಜತೆಗೆ ಮಹೇಶ್ ಅವರ ಮಗ ಅಭಯ್ ಕೂಡ ಅಲ್ಲಿಗೆ ಹೋಗಿದ್ದ. ಕೃಷಿ ಹೊಂಡದ ಪಕ್ಕ ನಿಂತಿದ್ದ ಅಭಯ್ ಆಯತಪ್ಪಿ ಹೊಂಡಕ್ಕೆ ಬಿದ್ದು ಮೇಲೆ ಬರಲಾಗದೆ ಒದ್ದಾಡುತ್ತಿದ್ದರು. ಕೂಡಲೆ ಮಾಲತೇಶ್ ರಕ್ಷಣೆಗೆ ಧಾವಿಸಿದ್ದರು. ಸುಮಾರು 10 ಅಡಿಯ ಕೃಷಿ ಹೊಂಡದಿಂದ ಮೇಲೆ ಬರಲಾಗದೆ ಇಬ್ಬರು ಮುಳುಗಿದ್ದಾರೆ ಎನ್ನಲಾಗಿದೆ.

ಮಾಲತೇಶ್
ಮಾಲತೇಶ್‌

ಇದನ್ನೂ ಓದಿ – ಆಯನೂರು ಬಳಿ ಮುಖಾಮುಖಿ ಡಿಕ್ಕಿ, ಒಬ್ಬನ ಕಾಲು ಕಟ್‌, ಹೇಗಾಯ್ತು ಘಟನೆ?

ವಿಷಯ ತಿಳಿದು ಗ್ರಾಮಸ್ಥರು ಇಬ್ಬರ ಮೃತದೇಹಗಳನ್ನು ಮೇಲೆತ್ತಿದ್ದಾರೆ. ಗಿರಿದೀಪಂ ಶಾಲೆಯ ವಿದ್ಯಾರ್ಥಿ ಅಭಯ್ ಈ ಬಾರಿ 9ನೇ ತರಗತಿಗೆ ಹೋಗಬೇಕಿತ್ತು. ಮಾಲತೇಶ್‌ಗೆ ಎಂಟು ತಿಂಗಳ ಹಿಂದೆ ಮದುವೆಯಾಗಿತ್ತು. ಘಟನೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment