ಶಿವಮೊಗ್ಗ ಲೈವ್
SHIVAMOGGA LIVE NEWS | 24 MAY 2024 (ಈ ಸುದ್ದಿಯನ್ನು ಇನ್ನು 35 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
SHIMOGA : ವಿದ್ಯಾನಗರ ಮುಖ್ಯರಸ್ತೆಯಲ್ಲಿರುವ ಶಿವಶಂಕರ ವೈನ್ ಶಾಪ್ನ ಬಾಗಿಲುನ್ನು ಆಯುಧದಿಂದ ಮೀಟಿ ಕಳ್ಳತನ ಮಾಡಲಾಗಿದೆ. ನಗದು ಮತ್ತು ಸಿಸಿಟಿವಿಯ DVR ಕಳುವಾಗಿದೆ ಎಂದು ಆರೋಪಿಸಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಇದನ್ನೂ ಓದಿ – ಕೃಷಿ ಹೊಂಡದಲ್ಲಿ ಬಿದ್ದ ಬಾಲಕನ ರಕ್ಷಣೆಗೆ ಧಾವಿಸಿದ ಯುವಕ, ಇಬ್ಬರು ಸಾವು, ಹೇಗಾಯ್ತು ಘಟನೆ?
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ
ಎಂದಿನಂತೆ ಬೆಳಗ್ಗೆ ವೈನ್ ಶಾಪ್ ಬಾಗಿಲು ತೆಗೆಯಲು ಸಿಬ್ಬಂದಿ ಬಂದಾಗ ಷಟರ್ ಬಾಗಿಲು ಮೀಟಿದಂತೆ ಕಾಣಿಸಿತ್ತು. ಪಕ್ಕದ ಮತ್ತೊಂದು ಷಟರ್ ತೆಗೆದು ಒಳ ಹೋಗಿ ಪರಿಶೀಲಿಸಿದಾಗ 20 ಸಾವಿರ ರೂ. ನಗದು ಕಳ್ಳತನವಾಗಿತ್ತು. ಸಿಸಿಟಿವಿಯ ಡಿವಿಆರ್ ಕೂಡ ನಾಪತ್ತೆಯಾಗಿತ್ತು. ಒಟ್ಟು 38 ಸಾವಿರ ರೂ. ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
