ಶಿವಮೊಗ್ಗದಲ್ಲಿ ರಸ್ತೆಗಿಳಿದ ಚೆನ್ನಮ್ಮ ಪಡೆ, ಕಾರ್ಯಾಚರಣೆ ಆರಂಭ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 MAY 2024

SHIMOGA : ಪುಂಡ, ಪೋಕರಿಗಳಿಗೆ ಹಾವಳಿ ತಡೆಗೆ, ವಿದ್ಯಾರ್ಥಿನಿಯರು, ಮಹಿಳೆಯರ ರಕ್ಷಣೆಗೆ ಆರಂಭಿಸಿರುವ ಚೆನ್ನಮ್ಮ ಪಡೆಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಚಾಲನೆ ನೀಡಿದರು. ಕಮಲಾ ನೆಹರು ಕಾಲೇಜಿನಲ್ಲಿ ಚೆನ್ನಮ್ಮ ಪಡೆಯ ಗಸ್ತು (Patrol) ವಾಹನಕ್ಕೆ ಹಸಿರು ನಿಶಾನೆ ತೋರಿಸಿದರು.

ಇದೆ ವೇಳೆ ಮಾತನಾಡಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಯಾವುದೇ ಕಾರಣಕ್ಕೂ ಕಿರಿಕಿರಿಗಳಿಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆ ಮತ್ತು ರಕ್ಷಣೆ ನೀಡುವುದು ಪೊಲೀಸ್ ಇಲಾಖೆ ಕರ್ತವ್ಯ. ಅವರ ರಕ್ಷಣೆ ಮಾಡುವಲ್ಲಿ ಸಮುದಾಯದತ್ತ ಪೊಲೀಸ್‌ನ ಒಂದು ಭಾಗವಾಗಿ ಚೆನ್ನಮ್ಮ ಪಡೆ ರಚಿಸಲಾಗಿದೆ. ಯಾರಾದರೂ ಹಿಂಬಾಲಿಸುವುದು, ಚುಡಾಯಿಸುವುದು ಮಾಡಿದರೆ ಭಯ ಪಡದೆ ಕೂಡಲೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.

ಇದನ್ನೂ ಓದಿ – ಮೊಬೈಲ್‌ ನೆಟ್‌ವರ್ಕ್‌ಗಾಗಿ ಟವರ್‌ ಏರಿದ ಗ್ರಾಮಸ್ಥರು, ಅಧಿಕಾರಿಗಳು ಸ್ಥಳಕ್ಕೆ ದೌಡು, ಫಿಕ್ಸ್‌ ಆಯ್ತು ಗಡುವು

ಕಾಲೇಜಿನ ಪ್ರಾಚಾರ್ಯ ಹೆಚ್.ಎಸ್.ನಾಗಭೂಷಣ್, ಕಸ್ತೂರಬಾ ಮಹಿಳಾ ಕಾಲೇಜಿನ ಪ್ರಾಚಾರ್ಯ ವೆಂಕಟೇಶ್, ಎಎಸ್ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ, ಎ.ಜಿ.ಕಾರ್ಯಪ್ಪ, ಡಿವೈಎಸ್ಪಿಗಳಾದ ಪ್ರಕಾಶ್, ಬಾಬು ಆಂಜನಪ್ಪ, ಎಂ.ಸುರೇಶ್ ಸೇರಿದಂತೆ ಹಲವರು ಇದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment