ಹಾಸನ ಚಲೋಗೆ ಶಿವಮೊಗ್ಗದಿಂದಲು ದೊಡ್ಡ ಸಂಖ್ಯೆಯ ಜನ, ಏನಿದು ಹಾಸನ ಚಲೋ? ಕಾರಣವೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIVAMOGGA LIVE NEWS | 28 MAY 2024
➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

SHIMOGA : ಪ್ರಜ್ವಲ್‌ ರೇವಣ್ಣನನ್ನು ಕೂಡಲೆ ಬಂಧಿಸಬೇಕು ಎಂದು ಅಗ್ರಹಿಸಿ ಮೇ 30ರಂದು ಹಾಸನ ಚಲೋ (Hassan Chalo) ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಹಲವು ಸಂಘಟನೆಗಳು ಪ್ರತಭಟನೆಯಲ್ಲಿ ಭಾಗವಹಿಸಲಿವೆ ಎಂದು ಹಾಸನ ಚಲೋ ಸಂಚಾಲಕ ಕೆ.ಪಿ.ಶ್ರೀಪಾಲ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ.ಶ್ರೀಪಾಲ್‌, ಅಂದು ಬೆಳಗ್ಗೆ ಮಹಾರಾಜ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ. ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿ ಇರುವ ಮಾಹಿತಿ ಇದ್ದರೂ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲ. ಈಗ ಆತ ವಿಡಿಯೋ ಬಿಡುಗಡೆ ಮಾಡಿ ಕುಟುಂಬದವರ ಕ್ಷಮೆ ಮಾತ್ರ ಕೇಳಿದ್ದಾನೆ. ವಾಸ್ತವದಲ್ಲಿ ರಾಜ್ಯದ ಜನರ ಕ್ಷಮೆಯಾಚಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

10 ಸಾವಿರಕ್ಕೂ ಹೆಚ್ಚು ಜನರು ಭಾಗಿ

ಪ್ರಗತಿಪರ ಹೋರಾಟಗಾರ ಕೆ.ಎಲ್.ಅಶೋಕ್‌ ಮಾತನಾಡಿ, ಈ ಅಸಭ್ಯ, ಅಶ್ಲೀಲ, ಅನಾಗರಿಕ ಕ್ರೂರತೆ ಖಂಡಿಸಿ ರಾಜ್ಯಾದ್ಯಂತ ಹಾಸನ ಚಲೋ ಹಮ್ಮಿಕೊಳ್ಳಲಾಗಿದೆ. ರೈತ ಸಂಘಟನೆಗಳು, ಮಹಿಳಾ ವೇದಿಕೆಗಳು, ವಿವಿಧ ಸಾಹಿತಿಗಳು, ನಿವೃತ್ತ ನ್ಯಾಯಮೂರ್ತಿಗಳು, ಚಿಂತಕರು, ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ. ಸುಮಾರು 10 ಸಾವಿರ ಜನರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹಾಲೇಶಪ್ಪ, ನಾರಾಯಣ್‌, ಪ್ರಭಾಕರ್‌, ಹನುಮಕ್ಕ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ – ಶಿವಮೊಗ್ಗಕ್ಕೆ ಸಿಐಡಿ ಅಧಿಕಾರಿಗಳು, ಪೆನ್‌ ಡ್ರೈವ್‌ ವಶಕ್ಕೆ

Leave a Comment