ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 JUNE 2024
SHIMOGA : ಲೋಕಸಭೆ ಚುನಾವಣೆ ಮತ ಎಣಿಕೆ (Counting) ಕಾರ್ಯಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ಬಿಗಿ ಭದ್ರತೆ ನಡುವೆ ಜೂನ್ 4ರಂದು ಬೆಳಗ್ಗೆ 8 ಗಂಟೆಯಿಂದ ಸಹ್ಯಾದ್ರಿ ಕಲಾ ಕಾಲೇಜು ಅವರಣದಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.
ಮತ ಎಣಿಕೆಗೆ ಹೀಗಿದೆ ಸಿದ್ಧತೆ?
ಸಹ್ಯಾದ್ರಿ ಕಾಲೇಜಿನಲ್ಲಿ ಸ್ಟ್ರಾಂಗ್ ರೂಮ್ ಸ್ಥಾಪಿಸಲಾಗಿದೆ. ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳ ಮತ ಯಂತ್ರಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಮತ ಎಣಿಕೆ ಕಾರ್ಯಕ್ಕೆ ಆಗಮಿಸುವ ಅಧಿಕಾರಿಗಳು, ಏಜೆಂಟರು ಬೆಳಗ್ಗೆ 7 ಗಂಟೆಗೆ ಎಣಿಕೆ ಕೇಂದ್ರದ ಭದ್ರತಾ ಕೊಠಡಿಗೆ ಆಗಮಿಸಲಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್ ಸ್ಥಾಪಿಸಲಾಗುತ್ತದೆ. ಎಣಿಕೆ ಸ್ಥಳದಲ್ಲಿ ಅಭ್ಯರ್ಥಿಗಳು, ಚುನಾವಣಾ ಏಜೆಂಟರು, ಮತ ಎಣಿಕೆ ಏಜೆಂಟರಿಗೆ ಮಾತ್ರ ಪ್ರವೇಶವಿರಲಿದೆ. ಎಣಿಕೆ ಕಾರ್ಯಕ್ಕೆ ಒಬ್ಬ ಮೇಲ್ವಿಚಾರಕರು, ಒಬ್ಬ ಸಹಾಯಕ, ಒಬ್ಬ ಮೈಕ್ರೋ ಅಬ್ಸರ್‌ವರ್ ನೇಮಿಸಲಾಗುತ್ತದೆ. ಏಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧಿಸಲಾಗಿದೆ.
8 ಗಂಟೆಯಿಂದ ಎಣಿಕೆ ಶುರು
ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಇದು ಮುಗಿದ ಬಳಿಕ ಮತ ಯಂತ್ರಗಳಲ್ಲಿನ ಮತಗಳ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬಳಿಕ ವಿವಿ ಪ್ಯಾಟ್‌ನಲ್ಲಿನ ಮತಗಳ ಎಣಿಕೆ ನಡೆಯಲಿದೆ. ಪ್ರತಿ ವಿಧಾನಸಭೆ ಕ್ಷೇತ್ರದಿಂದ ಐದು ವಿವಿ ಪ್ಯಾಟ್‌ಗಳ ಎಣಿಕೆ ನಡೆಯಲಿದೆ.
ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಸುತ್ತು?
ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2039 ಬೂತ್‌ಗಳಿವೆ. ವಿಧಾನಸಭೆ ಕ್ಷೇತ್ರವಾರು ಹಲವು ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ.
ವಿಧಾನಸಭೆ ಕ್ಷೇತ್ರ | ಬೂತ್ಗಳು | ಸುತ್ತುಗಳು |
ಶಿವಮೊಗ್ಗ ಗ್ರಾಮಾಂತರ | 249 | 18 |
ಭದ್ರಾವತಿ | 253 | 19 |
ಶಿವಮೊಗ್ಗ | 288 | 21 |
ತೀರ್ಥಹಳ್ಳಿ | 258 | 19 |
ಶಿಕಾರಿಪುರ | 235 | 17 |
ಸೊರಬ | 239 | 18 |
ಸಾಗರ | 271 | 19 |
ಬೈಂದೂರು | 246 | 18 |
ಎಷ್ಟು ಅಧಿಕಾರಿಗಳನ್ನು ನೇಮಿಸಲಾಗಿದೆ?
ಮತ ಎಣಿಕೆ ಕಾರ್ಯಕ್ಕೆ ಒಟ್ಟು 523 ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. ಈ ಪೈಕಿ 119 ಎಣಿಕೆ ಸೂಪರ್‌ವೈಸರ್‌ಗಳು, 126 ಕೌಂಟಿಂಗ್ ಅಸಿಸ್ಟೆಂಟ್, 127 ಮೈಕ್ರೋ ಅಬ್ಸರ್‌ವರ್, 119 ಗ್ರೂಪ್ ಡಿ ನೌಕರರನ್ನು ನಿಯೋಜಿಸಲಾಗಿದೆ. ಈಗಾಗಲೆ ಎಣಿಕೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮತದಾನ ಚುರುಕು, ಹಕ್ಕು ಚಲಾಯಿಸಿದ ಡಾ. ಸರ್ಜಿ, ಆಯನೂರು, ದಿನೇಶ್, ಈತನಕ ಎಷ್ಟಾಗಿದೆ ಓಟಿಂಗ್?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422