ಶಿವಮೊಗ್ಗದಲ್ಲಿ ಎಣಿಕೆ ಕೇಂದ್ರದ ಮುಂದೆ ಕೊಬ್ಬರಿ ಹಾರ ತಂದು ಸಂಭ್ರಮಾಚರಣೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEW S | 4 JUNE 2024

RESULT UPDATE : ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘೇಂದ್ರ ಮತ ಗಳಿಕೆ ಪ್ರಮಾಣ ಏರಿಕೆ ಆಗುತ್ತಿದ್ದಂತೆ ಕಾರ್ಯಕರ್ತರು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಮತ ಎಣಿಕೆ ಕೇಂದ್ರದ ಎದುರು ಮತ್ತು ನಗರದ ವಿವಿಧೆಡೆ ಸಂಭ್ರಮಾರಣೆ ಮಾಡುತ್ತಿದ್ದಾರೆ.

ಕೊಬ್ಬರಿ ಹಾರ ತಂದ ಅಭಿಮಾನಿಗಳು

ಮತ ಏಣಿಕೆ ಕೇಂದ್ರದ ಮುಂದೆ ರಾಘವೇಂದ್ರ ಅಭಿಮಾನಿಗಳು ಘೋಷಣೆ ಕೂಗುತ್ತ, ಬಿಜೆಪಿ ಧ್ವಜ ತಿರುಗಿಸಿ ಖುಷಿಪಟ್ಟರು. ಕ್ರೇನ್‌ನಲ್ಲಿ ದೊಡ್ಡ ಕೊಬ್ಬರಿ ಹಾರ ತಂದಿದ್ದಾರೆ. ಪ್ರತಿ ಸುತ್ತಿನ ಮತ ಫಲಿತಾಂಶ ಪ್ರಕಟಿಸುತ್ತಿದ್ದಂತೆ ಅಭಿಮಾನಿಗಳು ಖುಷಿಯಿಂದ ಘೋಷಣೆ ಕೂಗುತ್ತಿದ್ದಾರೆ.

ಇನ್ನು ನಗರದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚುತ್ತಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ ಫಲಿತಾಂಶ LIVE – ಬೆಳಗ್ಗೆ 10ರವರೆಗೆ ಯಾರಿಗೆ ಎಷ್ಟು ಮತ ಲಭಿಸಿದೆ? ಈವರೆಗೂ ಎಷ್ಟು ಮತ ಎಣಿಕೆ ಆಗಿದೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment