SHIVAMOGGA LIVE NEWS | 5 JUNE 2024 (ಈ ಸುದ್ದಿಯನ್ನು ಇನ್ನು 43 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
SHIMOGA : ಯಾರೂ ಇಲ್ಲದ ಸಂದರ್ಭ ಜ್ಯೋತಿಷಿಯ (Jyotishi) ಮನೆಯ ಹಿಂಬಾಗಿಲು ತೆಗೆದು ಒಳ ನುಗ್ಗಿರುವ ಕಳ್ಳರು 12.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದಾರೆ. ಶಿವಮೊಗ್ಗದ ಹೊಸಮನೆ ಬಡಾವಣೆಯ ಜ್ಯೋತಿಷಿ ಸಂತೋಷ್ ಭಟ್ ಅವರ ಮನೆಯಲ್ಲಿ ಘಟನೆ ಸಂಭವಿಸಿದೆ.
ಸಂತೋಷ್ ಭಟ್ ಅವರು ಕುಟುಂಬ ಸಹಿತ ದುಬೈಗೆ ತೆರಳಿದ್ದರು. ಈ ಸಂದರ್ಭ ಮನೆಯ ಹಿಂಬಾಗಿಲಿನ ಮೂಲಕ ಕಳ್ಳರು ಒಳ ನುಗ್ಗಿ 3.45 ಲಕ್ಷ ರೂ. ನಗದು, ಸುಮಾರು 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂತೋಷ್ ಭಟ್ ಅವರ ಪರಿಚಿತರು ಮನೆ ಬಳಿ ತೆರಳಿದ್ದಾಗ ಮುಂದಿನ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅನುಮಾನ ಬಂದು ಹಿಂಬಾಗಿಲ ಬಳಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ‘ಹೋಗಿಬರಲಿ ಟಾಟಾ..!ʼ ಮಧು, ನಟ ಶಿವರಾಜ್ ಕುಮಾರ್, ಗೀತಾಗೆ ಫೇಸ್ಬುಕ್ನಲ್ಲಿ ಕುಮಾರ್ ಟಕ್ಕರ್
