ಮರು ಮೌಲ್ಯಮಾಪನದ ಬಳಿಕ ಶಿವಮೊಗ್ಗ ಶಾರ್ವರಿ ರಾವ್‌ ರಾಜ್ಯಕ್ಕೆ ಟಾಪರ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 7 JUNE 2024

SHIMOGA : ಆಲ್ಕೊಳ ವಿಕಾಸ ಪ್ರೌಢಶಾಲೆಯ SSLC ವಿದ್ಯಾರ್ಥಿನಿ ಶಾರ್ವರಿ ಪಿ. ರಾವ್‌ ಮರು ಮೌಲ್ಯಮಾಪನದಲ್ಲಿ (Revaluation) ಹೆಚ್ಚುವರಿಯಾಗಿ 9 ಅಂಕ ಪಡೆದಿದ್ದಾರೆ. ಈಗ ಒಟ್ಟಾರೆ 622 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್‌  ಪಡೆದಿದ್ದಾಳೆ. ವಿಜ್ಞಾನ ವಿಷಯದಲ್ಲಿ 91 ಅಂಕ ಬಂದಿತ್ತು. ಹೆಚ್ಚು ಅಂಕ ಬರುವ ವಿಶ್ವಾಸವಿದ್ದುದರಿಂದ ಮರುಮೌಲ್ಯಮಾಪನ ಮಾಡಿಸಿದ್ದು, ವಿಜ್ಞಾನದಲ್ಲಿ 100 ಅಂಕ ಲಭಿಸಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ವರುಣ್‌ಗೆ ಹೆಚ್ಚುವರಿ ಎಂಟು ಮಾರ್ಕ್ಸ್

ಕಲ್ಲಹಳ್ಳಿ ಪ್ರಿಯದರ್ಶಿನಿ ಪ್ರೌಢಶಾಲೆಯ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿ ಎಂ.ವೈ.ವರುಣ್‌ಗೆ ಮರು ಮೌಲ್ಯಮಾಪನದ ಬಳಿಕ ಎರಡು ವಿಷಯದಲ್ಲಿ ಹೆಚ್ಚುವರಿಯಾಗಿ 8 ಅಂಕಗಳು ಲಭಿಸಿದೆ. ಒಟ್ಟಾರೆಯಾಗಿ 603 ಅಂಕ ಪಡೆದಿದ್ದಾನೆ. ಮರು ಮೌಲ್ಯಮಾಪನದಲ್ಲಿ ಈತನಿಗೆ ವಿಜ್ಞಾನದಲ್ಲಿ ಮೂರು ಹಾಗೂ ಸಮಾಜ ವಿಜ್ಞಾನದಲ್ಲಿ 5 ಅಂಕಗಳು ದೊರೆತಿವೆ.

ಇದನ್ನೂ ಓದಿ – ಹೊಟೇಲ್‌ನಲ್ಲಿ ಬ್ಯಾಗ್‌ ಮರೆತ ಗ್ರಾಹಕ, ಒಳಗಿತ್ತು ಲಕ್ಷ ಲಕ್ಷ ಹಣ, ವಾಪಸ್‌ ಬಂದು CCTV ನೋಡಿದ್ಮೇಲೆ ಕಾದಿತ್ತು ಆಘಾತ

Leave a Comment