ಉದ್ಯಮಿಯ ವಾಟ್ಸಪ್‌ಗೆ ಬಂತು ಫೋಟೊ, ನೋಡ್ತಿದ್ದಂತೆ ಆಯ್ತು ಡಿಲೀಟ್‌, ನಂತರ ಬಂತು ‘ಬ್ರೇಕಿಂಗ್‌ ನ್ಯೂಸ್‌ʼ

SHIVAMOGGA LIVE NEWS | 10 JUNE 2024

ಸುದ್ದಿಯ ಮುಂದಿನ ಭಾಗ ಕೆಳಗಿದೆ

SHIMOGA : ಹಣ ಕೊಡದಿದ್ದರೆ ಖಾಸಗಿ ಫೋಟೊವನ್ನು (Photo) ಕುಟುಂಬದವರು, ಉದ್ಯೋಗಿಗಳಿಗೆ ಕಳುಹಿಸುವುದಾಗಿ ಉದ್ಯಮಿಯೊಬ್ಬರಿಗೆ (ಹೆಸರು ಗೌಪ್ಯ) ಬೆದರಿಕೆ ಒಡ್ಡಲಾಗಿದೆ. ಅಪರಿಚಿತ ನಂಬರ್‌ನಿಂದ ಉದ್ಯಮಿಯ ವಾಟ್ಸಪ್‌ಗೆ ಫೋಟೊ ಬಂದಿತ್ತು. ಡೌನ್‌ ಲೋಡ್‌ ಮಾಡಿದಾಗ ಅದು ಅವರ ಖಾಸಗಿ ಫೋಟೊ ಎಂಬುದು ಗೊತ್ತಾಗಿತ್ತು. ತಕ್ಷಣ ಆ ಫೋಟೊವನ್ನು ಡಿಲೀಟ್‌ ಮಾಡಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ವೇಶ್ಯಾವಾಟಿಕೆ, ಮನೆ ಮೇಲೆ ಪೊಲೀಸ್‌ ದಾಳಿ

Nanjappa Hospital Advertisement

ಡೀಲ್‌ಗೆ ಒಪ್ಪದೆ ಇದ್ದರೆ ಖಾಸಗಿ ಫೋಟೊ ಮತ್ತು ವಿಡಿಯೋವನ್ನು ಉದ್ಯಮಿಯ ಕುಟುಂಬದವರು, ಉದ್ಯೋಗಿಗಳಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಲಾಗಿದೆ. ಆ ನಂತರ ನ್ಯೂಸ್‌ ಚಾನಲ್‌ನಲ್ಲಿ ವರದಿ ಪ್ರಕಟವಾಗಿರುವ ಮಾದರಿ ಬ್ರೇಕಿಂಗ್‌ ನ್ಯೂಸ್‌ ಎಂದು ಎಡಿಟ್‌ ಮಾಡಿ ವಾಟ್ಸಪ್‌ನಲ್ಲಿ ಕಳುಹಿಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಉದ್ಯಮಿ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment