ಬಂಗಾರಪ್ಪಗೆ ಎದುರಾಳಿಯಾಗಿದ್ದರು, ಗಾಜನೂರಿನಿಂದ ಗೆದ್ದಿದ್ದರು, ಭಾನುಪ್ರಕಾಶ್‌ ಕುರಿತು ಇಲ್ಲಿದೆ 5 ಪ್ರಮುಖಾಂಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 17 JUNE 2024

SHIMOGA : ಎಂ.ಬಿ.ಭಾನುಪ್ರಕಾಶ್‌ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ. ಎಂತಹ ಪರಿಸ್ಥಿತಿಯಲ್ಲು ಸಂಘಟನೆ ಮತ್ತು ಪಕ್ಷಕ್ಕಾಗಿ ನಿಲ್ಲುತ್ತಿದ್ದರು. ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರೂ, ಸಾಮಾನ್ಯ ಕಾರ್ಯಕರ್ತರ (Party Worker) ಜೊತೆಗೆ ಸ್ನೇಹದಿಂದ ಬೆರೆಯುತ್ತಿದ್ದರು. ಇದೆ ಕಾರಣಕ್ಕೆ ಭಾನುಪ್ರಕಾಶ್‌ ಅವರು ಸಂಘ ಪರಿವಾರದ ಪ್ರತಿಯೊಬ್ಬರಿಗು ಪರಿಚಿತ.

ಕಾರ್ಯಕರ್ತರ ಮಧ್ಯದಲ್ಲೇ ಕೊನೆಯುಸಿರು

POINT-1ಪೆಟ್ರೋಲ್‌, ಡಿಸೇಲ್‌ ದರ ಏರಿಕೆ ಖಂಡಿಸಿ ಗೋಪಿ ಸರ್ಕಲ್‌ನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಈ ಸಂದರ್ಭ ಎಂ.ಬಿ.ಭಾನುಪ್ರಕಾಶ್‌ ಅವರು ಮುಖಂಡರನ್ನು ಮಾತ್ರವಲ್ಲ, ಕಾರ್ಯಕರ್ತರ ಜೊತೆಗು ಬೆರೆತು ಮಾತನಾಡಿಸುತ್ತಿದ್ದರು. ಈಚೆಗಷ್ಟೆ ಪಕ್ಷ ಸೇರಿ, ಸಕ್ರಿಯವಾಗಿರುವವರನ್ನು ಇವತ್ತು ಕರೆದು ಮಾತನಾಡಿಸಿದ್ದರು. ಇದಾಗಿ ಕೆಲವೇ ಕ್ಷಣದಲ್ಲಿ ಕಾರ್ಯಕರ್ತರ ನಡುವೆಯೇ ಅವರು ಕೊನೆಯುಸಿರೆಳೆದರು.

ಜಿಲ್ಲಾ ಪಂಚಾಯಿತಿಯಿಂದ ಪರಿಷತ್‌ ತನಕ

POINT-2ಶಿವಮೊಗ್ಗ ತಾಲೂಕು ಮತ್ತೂರಿನ ಎಂ.ಬಿ.ಭಾನುಪ್ರಕಾಶ್‌ ಅವರು ಬಿಜೆಪಿಯಲ್ಲಿ ಕೆಳಹಂತದಿಂದ ಬೆಳೆದು ಬಂದವರು. ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು, ರಾಜ್ಯ ಉಪಾಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. 2001 ರಿಂದ 2005ರವರೆಗೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿಗೆ ಗಾಜನೂರು ಕ್ಷೇತ್ರದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

POINT-3ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರು ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದ್ದರು. ಈ ಹಿನ್ನೆಲೆ 2005ರಲ್ಲಿ ಲೋಕಸಭೆ ಉಪ ಚುನಾವಣೆ ನಡೆದಿತ್ತು. ಎಸ್‌.ಬಂಗಾರಪ್ಪ ವಿರುದ್ಧ ಬಿಜೆಪಿಯಿಂದ ಎಂ.ಬಿ.ಭಾನುಪ್ರಕಾಶ್‌ ಕಣಕ್ಕಿಳಿದಿದ್ದರು. 1.48 ಲಕ್ಷ ಮತ ಗಳಿಸಿದ್ದರು. 2013 ರಿಂದ 2019ರವರೆಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದರು.

ಇದನ್ನೂ ಓದಿ – ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌ಗೆ ಹೃದಯಾಘಾತ, ನಿಧನ

POINT-4ನಳೀನ್‌ ಕುಮಾರ್‌ ಕಟೀಲ್‌ ಅವರು 2019ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ಎಂ.ಬಿ.ಭಾನುಪ್ರಕಾಶ್‌ ಅವರು ರಾಜ್ಯ ಉಪಾಧ್ಯಕ್ಷರಾಗಿದ್ದರು. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ಭಾನಪ್ರಕಾಶ್‌ ಅವರಿಗೆ ರಾಜ್ಯ ಉಪಾಧ್ಯಕ್ಷ ಹುದ್ದೆ ನೀಡಲಾಗಿತ್ತು. ಅದರೆ ಯಡಿಯೂರಪ್ಪ ಅವರೊಂದಿಗೆ ಭಿನ್ನಾಭಿಪ್ರಾಯದಿಂದ ಉಪಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳದೆ ಸಾಮಾನ್ಯ ಕಾರ್ಯಕರ್ತನಂತೆ ಪಕ್ಷಕ್ಕಾಗಿ ದುಡಿಯುವುದಾಗಿ ಘೋಷಿಸಿದ್ದರು.

POINT-5ಈಚೆಗೆ ರಾಜ್ಯ ಪ್ರಕೋಷ್ಠಗಳ ಸಂಯೋಜಕರು, ಲೋಕಸಭೆ ಕ್ಲಸ್ಟರ್‌ ಸಂಯೋಜಕರಾಗಿ ಪಕ್ಷದಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಗೆಲುವಿಗೆ ಎಂ.ಬಿ.ಭಾನುಪ್ರಕಾಶ್‌ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಇದನ್ನೂ ಓದಿ – ‘ಕಾರು ಹತ್ತುತ್ತಿದ್ದಂತೆ ಕುಸಿದು ಬಿದ್ದರುʼ, ಭಾನುಪ್ರಕಾಶ್‌ ಅವರ ಕೊನೆ ಕ್ಷಣಗಳನ್ನು ವಿವರಿಸಿದ ಅರುಣ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 17, 2024

Leave a Comment