ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯ ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ಮಳೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 18 JUNE 2024

RAINFALL NEWS : ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಸಂಪೂರ್ಣ ತಗ್ಗಿದೆ. ಕಳೆದ 24 ಗಂಟೆಯಲ್ಲಿ ಸಾಗರ, ಹೊಸನಗರ ತಾಲೂಕು ಹೊರತು ಉಳಿದೆಲ್ಲು ದೊಡ್ಡ ಪ್ರಮಾಣದ ಮಳೆಯಾಗಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಜೂ.17ರ ಬೆಳಗ್ಗೆ 8.30ರಿಂದ ಜೂ.18ರ ಬೆಳಗ್ಗೆ 8.30ರವರೆಗಿನ ಮಳೆ ಪ್ರಮಾಣವನ್ನು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ಪ್ರಕಟಿಸಲಾಗಿದೆ. ಈ ಅವಧಿಯಲ್ಲಿ ಭದ್ರಾವತಿಯಲ್ಲಿ 0.2 ಮಿ.ಮೀ, ಹೊಸನಗರದಲ್ಲಿ 2.4 ಮಿ.ಮೀ, ಸಾಗರದಲ್ಲಿ 9 ಮಿ.ಮೀ, ಶಿಕಾರಿಪುರದಲ್ಲಿ 0.6 ಮಿ.ಮೀ, ಶಿವಮೊಗ್ಗದಲ್ಲಿ 0.3 ಮಿ.ಮೀ, ಸೊರಬದಲ್ಲಿ 0.1 ಮಿ.ಮೀ, ತೀರ್ಥಹಳ್ಳಿಯಲ್ಲಿ 0.4 ಮಿ.ಮೀ ಮಳೆಯಾಗಿದೆ.

ವಾಡಿಕೆಗಿಂತಲೂ ಕಡಿಮೆ ಮಳೆ

ಜೂನ್‌ 1 ರಿಂದ ಜೂನ್‌ 17ರವರೆಗೆ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಲ್ಲಿ ತಿಳಿಸಲಾಗಿದೆ.

ತಾಲೂಕುವಾಡಿಕೆ ಮಳೆವಾಸ್ತವದ ಮಳೆ
ಭದ್ರಾವತಿ56.3 ಮಿ.ಮೀ44.7 ಮಿ.ಮೀ
ಹೊಸನಗರ339.5 ಮಿ.ಮೀ165.8 ಮಿ.ಮೀ
ಸಾಗರ233 ಮಿ.ಮೀ280 ಮಿ.ಮೀ
ಶಿಕಾರಿಪುರ83.2 ಮಿ.ಮೀ67 ಮಿ.ಮೀ
ಶಿವಮೊಗ್ಗ65.1 ಮಿ.ಮೀ55.1 ಮಿ.ಮೀ
ಸೊರಬ136.3 ಮಿ.ಮೀ70.5 ಮಿ.ಮೀ
ತೀರ್ಥಹಳ್ಳಿ256 ಮಿ.ಮೀ133.2 ಮಿ.ಮೀ

ಇದನ್ನೂ ಓದಿ – ಭದ್ರಾ ಜಲಾಶಯದ ಒಳ ಹರಿವು ಕುಸಿತ, ಅಚ್ಚುಕಟ್ಟು ಭಾಗದ ರೈತರಲ್ಲಿ ಆತಂಕ, ಇವತ್ತು ಎಷ್ಟಿದೆ ನೀರಿನ ಮಟ್ಟ?

Leave a Comment