NEWS HIGHLIGHTS
SHIVAMOGGA LIVE NEWS | 24 JUNE 2024
➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.HOSANGARA : ನಾಲ್ಕು ಕಾಡುಕೋಣಗಳ (Bison) ಕಳೇಬರ ಪತ್ತೆಯಾದ ಪ್ರಕರಣ ಸಂಬಂಧ ವರದಿ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೊಸನಗರ ತಾಲ್ಲೂಕಿನ ಹುಂಚ ಬಳಿಯ ನಾಗರಹಳ್ಳಿ ಗ್ರಾಮದ ಬಳಿ ಈಚೆಗೆ ಕಾಡುಕೋಣಗಳ ಕಳೇಬರ ದೊರೆತಿದ್ದರು.
ನಾಡ ಬಂದೂಕು ಬಳಸಿ ಕಳ್ಳಬೇಟೆ ಮೂಲಕ ಕಾಡುಕೋಣಗಳ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಮಾಧ್ಯಮಗಳ ವರದಿ ಆಧರಿಸಿ ಸಚಿವ ಈಶ್ವರ ಖಂಡ್ರೆ ಅರಣ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆ ಬಗ್ಗೆ ಜೂನ್ 25ರ ಒಳಗೆ ವರದಿ ನೀಡಬೇಕು ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ – ಇಂದಿನಿಂದ ಸಂಸತ್ ಅಧಿವೇಶನ, ನೂತನ ಸಂಸದರಿಗೆ ಪ್ರಮಾಣ ವಚನ, ಮೋದಿ ಸರ್ಕಾರಕ್ಕೆ ಅಗ್ನಿಪರೀಕ್ಷೆ