ಶಿವಮೊಗ್ಗದ ಟೈಲರ್‌ಗೆ ರಸ್ತೆ ಮೇಲೆ ಸಿಕ್ತು 32 ಗ್ರಾಂನ ಚಿನ್ನದ ಸರ, ವಾರಸುದಾರರಿಗೆ ಹಸ್ತಾಂತರ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 JULY 2024

SHIMOGA : ಅಂಗಡಿ ಮುಂದೆ ಬಿದ್ದಿದ್ದ ಬಂಗಾರದ ಸರವನ್ನು ಪೊಲೀಸರ ಮೂಲಕ ಮಾಲೀಕರಿಗೆ ಒಪ್ಪಿಸಿ ಟೈಲರ್‌ (Tailor) ಒಬ್ಬರು ಪ್ರಾಮಾಣಿಕತೆ ಮರೆದಿದ್ದಾರೆ. ಬಿ.ಹೆಚ್‌.ರಸ್ತೆಯ ಸಂಗಮ್ ಟೈಲ‌ರ್ ಅಂಗಡಿ ಮಾಲೀಕ ಕುಮಾ‌ರ್ ಸರವನ್ನು ಮಾಲೀಕರಿಗೆ ಹಸ್ತಾಂತರಿಸಿದರು.

ಬುದ್ದನಗರದ ರಂಜಿತಾ ಮತ್ತು ಅವರ ತಾಯಿ ರಾಜೇಶ್ವರಿ ಅವರು ಬಿ.ಹೆಚ್‌.ರಸ್ತೆಯ ಸಂಗಮ್ ಟೈಲರ್ ಶಾಪ್ ಎದುರು ಶನಿವಾರ ಸಂಜೆ ಬೈಕ್‌ನಲ್ಲಿ ಹೋಗುತ್ತಿದ್ದಾಗ 32 ಗ್ರಾಂನ ಬಂಗಾರದ ಸರ ಬಿದ್ದಿತ್ತು. ಅದು ಕುಮಾರ್ ಅವರಿಗೆ ಸಿಕ್ಕಿತ್ತು. ಅದನ್ನು ಕುಮಾ‌ರ್ ಅವರು ಕೋಟೆ ಠಾಣೆ ಪೊಲೀಸರಿಗೆ ನೀಡಿದ್ದರು. ಕೋಟೆ ಠಾಣೆ ಇನ್‌ಸ್ಪೆಕ್ಟರ್ ಗುರು ಬಸವರಾಜ್ ಅವರ ಸಮ್ಮುಖದಲ್ಲಿ ಸರವನ್ನು ರಾಜೇಶ್ವರಿ ಅವರಿಗೆ ಹಸ್ತಾಂತರಿಸಿದರು.

gold-chain-returned-to-woman-at-Shimoga

ಇದನ್ನೂ ಓದಿ – ಭದ್ರಾವತಿ VISLಗೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ, ಮಹತ್ವದ ಮೀಟಿಂಗ್, ಏನೆಲ್ಲ ಪರಿಶೀಲಿಸಿದರು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 1, 2024

Leave a Comment