ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 JULY 2024
SHIMOGA : ಭದ್ರಾವತಿಯ VISL ಕಾರ್ಖಾನೆಗೆ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಸಚಿವ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
ಹೆಚ್‌ಡಿಕೆ ಹೇಳಿದೆ 6 ಪ್ರಮುಖಾಂಶ
ಭಾರತೀಯ ಉಕ್ಕು ಪ್ರಾಧಿಕಾರ (ಸೈಲ್)ದ ಆಸ್ತಿ ಉಳಿಸಿ ಮುಂದಿನ ದಿನಗಳಲ್ಲಿ ಕಾರ್ಮಿಕರ ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಲು ಬದ್ಧ. ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ಉಳಿಸಲು ಮೊದಲ ಹೆಜ್ಜೆ ಇಟ್ಟಿದ್ದೇವೆ.
ವಿಐಎಸ್‌ಎಲ್ ಕಾರ್ಖಾನೆ ಪುನಃಶ್ವೇತನ ಸಂಬಂಧ ಕಾರ್ಮಿಕರು ಮತ್ತು ಅಧಿಕಾರಿಗಳ ಜತೆಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಲೋಕಸಭಾ ಕಲಾಪ ನಡೆಯುತ್ತಿರುವ ಹಿನ್ನೆಲೆ ಇವತ್ತು ನಿರ್ಧಾರ ಪ್ರಕಟ ಮಾಡಿಲ್ಲ. ಆದರೆ ಕಾರ್ಖಾನೆ ಉಳಿಸಲು ಖಂಡಿತವಾಗಿ ಚಿಂತನೆ ನಡೆಸುತ್ತೇವೆ.ಕಾಲಪದ ಹಿನ್ನೆಲೆ ನಿರ್ಧಾರ ಪ್ರಟವಿಲ್ಲ
ಕಾರ್ಖಾನೆ ಉಳಿವಿಗಾಗಿ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಮತ್ತು ಶಾಸಕರಾಗಿದ್ದ ಎಂ.ಜಿ.ಅಪ್ಪಾಜಿ ಗೌಡ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಕಾರ್ಯಕ್ರಮ, ಆತ್ಮನಿರ್ಭರ ಯೋಜನೆ, ಮೇಕ್ ಇನ್ ಇಂಡಿಯಾ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಪರಿಕಲ್ಪನೆ ಮತ್ತು 2017ರ ಪಾಲಿಸಿಯಂತೆ ಕಾರ್ಖಾನೆ ಉಳಿಸಲು ಸಾಕಷ್ಟು ಅವಕಾಶಗಳಿವೆ.ಅಪ್ಪಾಜಿ, ರಾಘವೇಂದ್ರ ಪ್ರಯತ್ನ
ಗಣಿ ಅನುಮೋದನೆ ಸಿಕ್ಕಿದೆ
ಬಳ್ಳಾರಿಯ ರಮಣದುರ್ಗದಲ್ಲಿ ಕಬ್ಬಿಣದ ಅದಿರಿಗಾಗಿ ಗಣಿ ಅನುಮೋದನೆ ಸಿಕ್ಕಿದೆ. ಆದರೆ ಇನ್ನೂ ಆರಂಭವಾಗಿಲ್ಲ. ಈ ಬಗ್ಗೆಯೂ ಆರಂಭದ ಹೆಜ್ಜೆ ಇಟ್ಟಿದ್ದೇವೆ. ಇವೆಲ್ಲದಕ್ಕೂ ಉತ್ತರ ಮುಂದಿನ ದಿನಗಳಲ್ಲಿ ಸಿಗುತ್ತದೆ.
ಸಾಧಕ ಬಾಧಕ ಪರಿಶೀಲನೆ
ಕಾರ್ಖಾನೆಯನ್ನು ಬಂಡವಾಳ ಹೂಡಿಕೆ ಮತ್ತು ಮುಚ್ಚುವುದರಿಂದ ಹೊರತರಬೇಕೆಂಬುದು ಕಾರ್ಮಿಕರ ಒತ್ತಾಸೆ. ಈಗ ಕಾರ್ಮಿಕರಿಗೆ 13 ದಿನ ಕೆಲಸವಿದೆ. ಅದನ್ನು 26 ದಿನಗಳಿಗೆ ಏರಿಸಬೇಕೆಂಬ ಆಗ್ರಹವಿದೆ. ಈ ಎಲ್ಲ ಬೇಡಿಕೆಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡಲು ಸಾಧ್ಯವಿಲ್ಲ. ಆದರೆ ಕಾರ್ಖಾನೆ ಉಳಿವಿನ ಬಗ್ಗೆ ಸಾಧಕ-ಬಾಧಕ ಕ್ರೋಡೀಕರಿಸಿ ಮುಂದಿನ ದಿನಗಳಲ್ಲಿ ಏನು ಮಾಡಬಹುದೋ ಅದನ್ನು ಮಾಡುತ್ತೇನೆ. ಕಾರ್ಮಿಕರ ಬೇಡಿಕೆಗಳನ್ನು ಕಾನೂನು ವ್ಯಾಪ್ತಿಯೊಳಗೆ ಈಡೇರಿಸಲು ಸಾಧ್ಯವಾದರೆ ಬಗೆಹರಿಸುತ್ತೇವೆ.
300 ಮಿಲಿಯನ್ ಟನ್ ಉತ್ಪಾದನೆ ಗುರಿ
2017ರ ಪಾಲಿಸಿ ಪ್ರಕಾರ 2030ರ ವೇಳೆಗೆ ದೇಶದಲ್ಲಿ 300 ಮಿಲಿಯನ್ ಟನ್ ಕಬ್ಬಿಣ ಉತ್ಪಾದನೆ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಗುರಿ ಮುಟ್ಟಲು ಹಲವು ಯೋಜನೆಗಳನ್ನು ಆರಂಭಿಸಿದ್ದೇವೆ. ಅದಕ್ಕೆ ಪೂರಕವಾಗಿ ಎಲ್ಲ ತೀರ್ಮಾನಗಳನ್ನೂ ಮಾಡಲಿದ್ದೇವೆ. ಮಾಜಿ ಕೇಂದ್ರ ಸಚಿವ ಜಯರಾಮ್ ರಮೇಶ್ ಅವರು ಭಾರತದ ಐದು ಕಾರ್ಖಾನೆ ಬಗ್ಗೆ ನನ್ನ ಮುಂದೆ ಐದು ಪ್ರಶ್ನೆ ಇಟ್ಟಿದ್ದರು. ಆ ಪ್ರಶ್ನೆಗೆ ಮಾಹಿತಿ ಪಡೆಯಲು ಭದ್ರಾವತಿ ವಿಐಎಸ್‌ಎಲ್‌ಗೆ ಭೇಟಿ ನೀಡಿದ್ದೆ. ಕಾರ್ಮಿಕರ ಬದುಕು, ಕಾರ್ಖಾನೆ ಉಳಿಸುವ ಕುರಿತು ಏನು ಮಾಡಬಹುದು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸುತ್ತೇನೆ.
ಇದನ್ನೂ ಓದಿ – ಭದ್ರಾವತಿ VISLಗೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ, ಮಹತ್ವದ ಮೀಟಿಂಗ್, ಏನೆಲ್ಲ ಪರಿಶೀಲಿಸಿದರು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422