ಭದ್ರಾ ಡ್ಯಾಂ ತುಂಬುವ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೀರು ಪೋಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 5 JULY 2024

DAM NEWS : ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಭದ್ರಾ ಜಲಾಶಯದಿಂದ ಸಾವಿರಾರು ಕ್ಯೂಸೆಕ್‌ ನೀರು (water) ಪೋಲಾಗುತ್ತಿದೆ. ಸ್ಲೂಯಿಸ್‌ ಗೇಟ್‌ ನಿರ್ವಹಣೆ ವೇಳೆ ತಾಂತ್ರಿಕ ದೋಷ ಉಂಟಾಗಿ ಗೇಟ್‌ ಬಂದ್‌ ಆಗದೆ ಇರುವುದರಿಂದ ನೀರು ಹೊಳೆಗೆ ಹರಿದು ಹೋಗುತ್ತಿದೆ. ಇದು ರೈತರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ನದಿಗೆ ನೀರು ಹರಿಸಲು ಎರಡು ಸ್ಲೂಯಿಸ್‌ ಗೇಟ್‌ ಅಥವಾ ರಿವರ್‌ ಗೇಟ್‌ ನಿರ್ಮಿಸಲಾಗಿದೆ. ಈ ಪೈಕಿ ಒಂದು ಗೇಟ್‌ನಿಂದ ಅನಾಯಸವಾಗಿ ನೀರು ಹೊಳೆಗೆ ಹರಿದು ಹೋಗುತ್ತಿದೆ. ಮಳೆಗಾಲಕ್ಕೂ ಮೊದಲು ಭದ್ರಾ ಜಲಾಶಯದ ನಿರ್ವಹಣೆ ಮಾಡಬೇಕು. ಆದರೆ ಮಳೆಗಾಲದ ಹೊತ್ತಿಗೆ ನಿರ್ವಹಣೆ ಮಾಡಲು ಮುಂದಾಗಿದ್ದರು ಎಂಬ ಆರೋಪವಿದೆ. ಈ ಸಂದರ್ಭ ರಿವರ್‌ ಗೇಟ್‌ಗಳ ಪೈಕಿ ಒಂದು ಗೇಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ನೀರು ಹರಿದು ಹೋಗುತ್ತಿದೆ.

Bhadra-Dam-sluice-gate-opened

ಮಳೆಗಾಲದಲ್ಲಿ ಜಲಾಶಯದಲ್ಲಿ ನೀರು ಸಂಗ್ರಹವಾಗಬೇಕು. ಇದು ಬೇಸಿಗೆ ಹೊತ್ತಿಗೆ ಅಚ್ಚುಕಟ್ಟು ಭಾಗದ ರೈತರಿಗೆ ಅನುಕೂಲ ಆಗಲಿದೆ. ಆದರೆ ಮಳೆಗಾಲದಲ್ಲಿಯೇ ನೀರು ಹರಿದು ಹೋದರೆ, ಜಲಾಶಯದಲ್ಲಿ ನೀರು ಸಂಗ್ರಹವಾಗದೆ ಮುಂದೆ ಸಮಸ್ಯೆ ಉಂಟಾಗಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಇದನ್ನೂ ಓದಿ – ಮೈದುಂಬಿದ ತುಂಗೆ, ಜಲಾಶಯದ ಒಳ ಹರಿವು ಕುಸಿತ, ಹೊರ ಹರವು ಇಳಿಕೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment