ವಿದ್ಯುತ್‌ ಶಾಕ್‌ಗೆ ರಿಪ್ಪನ್‌ಪೇಟೆ ಬಳಿ ವಿದ್ಯಾರ್ಥಿ ಸಾವು, ಹೇಗಾಯ್ತು ಘಟನೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 12 JULY 2024

RIPPONPETE : ವಿದ್ಯುತ್‌ ಶಾಕ್‌ಗೆ ಯುವಕನೊಬ್ಬ (Youth) ಸಾವನ್ನಪ್ಪಿದ್ದಾನೆ. ರಿಪ್ಪನ್‌ಪೇಟೆ ಸಮೀಪದ ಗವಟೂರಿನ ಹಳೂರು ಗ್ರಾಮದಲ್ಲಿ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಕಾರ್ತಿಕ್‌ (19) ಮೃತ ದುರ್ದೈವಿ.

ಇವತ್ತು ಬೆಳಗ್ಗೆ ಕಾರ್ತಿಕ್‌ ತನ್ನ ಮನೆ ಸಮೀಪದ ಐಬಿಎಕ್ಸ್‌ ಬೇಲಿ ಬಳಿ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್‌ ಪ್ರವಹಿಸಿದೆ. ಬೇಲಿಯ ಮೇಲೆಯೇ ಕಾರ್ತಿಕ್‌ ಬಿದ್ದಿದ್ದಾನೆ. ಇದನ್ನು ಗಮನಿಸಿದ ಮನೆಯವರು, ಸ್ಥಳೀಯರ ನೆರವಿನೊಂದಿಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಿ ಕಾರ್ತಿಕ್‌ ಕೊನೆಯುಸಿರೆಳೆದಿದ್ದ ಎಂದು ತಿಳಿದು ಬಂದಿದೆ.

Youth-succumbed-to-electric-shock-near-ripponpete.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ತಿಕ್‌ ಪ್ರಥಮ ವರ್ಷದ ಬಿಬಿಎ ಓದುತ್ತಿದ್ದ. ರಿಪ್ಪನ್‌ಪೇಟೆ ಠಾಣೆ ಪಿಎಸ್‌ಐ ಪ್ರವೀಣ್‌, ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ – ಅರಣ್ಯಾಧಿಕಾರಿಗಳ ದಾಳಿ, ವಾಹನ ಸಹಿತ ಇಬ್ಬರು ಆರೋಪಿಗಳು ಅರೆಸ್ಟ್‌, ಮೂವರು ಎಸ್ಕೇಪ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment