ಶಿವಮೊಗ್ಗ ಲೈವ್
SHIVAMOGGA LIVE NEWS | 15 JULY 2024
HOLEHONNURU : ರೋಲಿಂಗ್ ಷಟರ್ ಮುರಿದು, ಗೋಡೆ ಕೊರೆದು ಎಲೆಕ್ಟ್ರಿಕಲ್ ಅಂಗಡಿ ಮತ್ತು ಆಭರಣದ ಮಳಿಗೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ (Theft) ಮಾಡಲಾಗಿದೆ. ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ಭಾನುವಾರ ಘಟನೆ ಸಂಭವಿಸಿದೆ.
ರೇಣುಕಾಂಬಾ ಎಲೆಕ್ಟ್ರಿಕಲ್ ಅಂಗಡಿ ಹಿಂಬಾಗಿಲಿನ ರೋಲಿಂಗ್ ಷಟರ್ ಮುರಿದು ಒಳನುಗ್ಗಿ 5 ಲಕ್ಷ ರೂ. ನಗದು ದೋಚಿದ್ದಾರೆ. ಎಲೆಕ್ಟ್ರಿಕಲ್ ಅಂಗಡಿ ಶೌಚಗೃಹದ ಒಳಗಿಂದ ಪಕ್ಕದಲ್ಲಿನ ಪ್ರಕಾಶ್ ಆಭರಣದ ಅಂಗಡಿ ಗೋಡೆ ಕೊರೆದಿದ್ದಾರೆ. ಅಲ್ಲಿ ಸುಮಾರು 18.55 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕಳವು ಮಾಡಿದ್ದಾರೆ ಎಂದು ಅಂದಾಜಿಸಲಾಘಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ⇓
SHIMOGA JOBS – ಪ್ರತಿಷ್ಠಿತ ಆಸ್ಪತ್ರೆಯಲ್ಲಿ 31 ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ
