ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 JULY 2024
RAINFALL REPORT : ಹೊಸನಗರ ತಾಲೂಕಿನಲ್ಲಿ ಮಳೆ ಜೋರಾಗಿದೆ. ಭಾರಿ ಮಳೆಗೆ ಅಲ್ಲಲ್ಲಿ ಮನೆ, ಕೊಟ್ಟಿಗೆಗಳು ಹಾನಿಯಾಗಿವೆ. ಜಮೀನು ಜಲಾವೃತವಾಗಿವೆ. ಸೇತುವೆಯ ಪಿಚ್ಚಿಂಗ್ ಕುಸಿದಿದೆ.
ಹೊಸನಗರದಲ್ಲಿ ಎಲ್ಲೆಲ್ಲಿ ಏನೇನಾಗಿದೆ?
ಹೊನಸಗರ ತಾಲೂಕಿನ ವಿವಿಧೆಡೆ ನಿರಂತರ ಮಳೆಯಾಗುತ್ತಿದೆ. ಕಳೆದ ಮೂರ್ನಾಲ್ಕು ದಿನದಿಂದ ಮಳೆ ಪ್ರಮಾಣ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ ಮಾಣಿಯಲ್ಲಿ 172 ಮಿ.ಮೀ, ಯಡೂರಿನಲ್ಲಿ 145 ಮಿ.ಮೀ, ಹುಲಿಕಲ್‌ನಲ್ಲಿ 168 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 170 ಮಿ.ಮೀ, ಚಕ್ರಾದಲ್ಲಿ 113 ಮಿ.ಮೀ, ಸಾವೇಹಕ್ಲುವಿನಲ್ಲಿ 140 ಮಿ.ಮೀ ಮಳೆಯಾಗಿದೆ.ತಾಲೂಕಿನಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಹೊಸನಗರದ ಕಲ್ಲುಹಳ್ಳ ಸೇತುವೆ ಪಕ್ಕದ ಪಿಚ್ಚಿಂಗ್‌ನ ಕೆಲ ಭಾಗ ಕುಸಿದು ಬಿದ್ದಿದೆ. ಈ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಸೇತುವೆ ಪಿಚ್ಚಿಂಗ್ ಮತ್ತು ತಡೆಗೋಡೆ ಕುಸಿದು ಬೀಳುತ್ತಿದೆ. ರಾಣೆಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಸೇತುವೆ ನಿರ್ಮಿಸಿತ್ತು. ಈಗ ಪಿಚ್ಚಿಂಗ ಕುಸಿತದಿಂದ ವಾಹನ ಸವಾರರು ಆತಂಕಕ್ಕೀಡಾಗಿದ್ದಾರೆ. ಅಲ್ಲದೆ ಕಳಪೆ ಕಾಮಗಾರಿ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಿಪೇರಿ ಕಾರ್ಯ ಆರಂಭಿಸಿದರು. ಮಳೆ ಮತ್ತಷ್ಟು ಮುಂದುವರೆದರೆ ಪಿಚ್ಚಿಂಗ್ ಮತ್ತಷ್ಟು ಕುಸಿಯುವ ಆತಂಕವಿದೆ.ಕಲ್ಲುಹಳ್ಳ ಸೇತುವೆ ಪಿಚ್ಚಿಂಗ್ ಕುಸಿತ
ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಸುಗುಂಡಿಯ ಪಿಕಪ್ ಚಾನೆಲ್ ಒಡೆದು ನೀರು ಸುತ್ತಮುತ್ತಲಿನ ಕೃಷಿ ಜಮೀನಿಗೆ ನುಗ್ಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜೆಸಿಬಿ ಯಂತ್ರ ಬಳಸಿ ತಾತ್ಕಾಲಿಕವಾಗಿ ಚಾನೆಲ್ ದುರಸ್ತಿ ಮಾಡಿಸಿದರು. ಚಾನಲ್ ಒಡೆದು ಜಮೀನಿಗೆ ನೀರು ನುಗ್ಗಿರುವುದರಿಂದ ಅಪಾರ ನಷ್ಟವಾಗಿದೆ. ಹೆಚ್.ಕುನ್ನೂರು ಗ್ರಾಮದ ಕಾನ್‌ಕೆರೆಯ ದಂಡೆಗೂ ಹಾನಿ ಆಗಿದೆ.ಚಾನಲ್ ಒಡೆದು ಜಮೀನಿಗೆ ನೀರು
ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಟ್ಯಾಳಪುರ ಗ್ರಾಮದ ಪ್ರಭಾಕರ ಎಂಬುವರ ಮನೆಯ ಗೋಡೆ ಕುಸಿದಿದೆ. ಮಳೆಯ ರಭಸಕ್ಕೆ ಅಡುಗೆಮನೆ ಪಕ್ಕದ ಗೋಡೆ ನೆಲಕ್ಕುರುಳಿದೆ. ಇಡೀ ಮನೆಯೇ ಕುಸಿಯುವ ಹಂತದಲ್ಲಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದರು. ಇನ್ನೊಂದೆಡೆ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಕ್ಕಿ ಗ್ರಾಮದ ಅರಗೋಡಿ ನಾಗರಾಜ್ ಅವರ ಮನೆ ಮೇಲೆ ತೆಂಗಿನ ಮರ ಉರುಳಿಸಿದ್ದು ಹಾನಿ ಸಂಭವಿಸಿದೆ.ವಿವಿಧೆಡೆ ಮನೆಗಳಿಗೆ ಹಾನಿ
ಭಾರಿ ಮಳೆಗೆ ಜಲಾಶಯಗಳಿಗೆ ಒಳ ಹರಿವು ಏರಿಕೆಯಾಗಿದೆ. ಮಾಣಿ ಜಲಾಶಯಕ್ಕೆ ಇವತ್ತು 8579 ಕ್ಯೂಸೆಕ್ ಒಳ ಹರಿವು ಇದೆ. ಪಿಕಪ್ ಡ್ಯಾಮ್‌ಗೆ 3542 ಕ್ಯೂಸೆಕ್, ಚಕ್ರಾಗೆ 2957 ಕ್ಯೂಸೆಕ್, ಸಾವೇಹಕ್ಲುಗೆ 2150 ಕ್ಯೂಸೆಕ್ ಒಳ ಹರಿವು ಇದೆ.ಜಲಾಶಯಗಳ ಒಳ ಹರಿವು ಹೆಚ್ಚಳ
ನಿರಂತರ ಮಳೆಗೆ ಹೊಸನಗರ ತಾಲೂಕಿನ ಮೂಲೆಗದ್ದೆ ಬಸ್ ನಿಲ್ದಾಣ ಸಮೀಪದ ಬೃಹತ್ ಮರ ಧರೆಗುರುಳಿದೆ. ಹೊಸನಗರ – ಸಾಗರ ರಸ್ತೆಗೆ ಅಡ್ಡಲಾಗಿ ಮರ ಉರಳಿತ್ತು. ಇದರಿಂದ ವಾಹನ ಸಂಚಾರ ಕೆಲಕಾಲ ಸ್ಥಗಿತವಾಗಿತ್ತು. ಸ್ಥಳೀಯರು ಮರ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಮೂಲೆಗದ್ದೆ ನಿಲ್ದಾಣದ ಬಳಿ ಮರ ಧರೆಗೆ
ಇದನ್ನೂ ಓದಿ ⇓
ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಅಬ್ಬರ, ರಸ್ತೆ, ತೋಟ, ಗದ್ದೆ ಜಲಾವೃತ, ಎಲ್ಲೆಲ್ಲಿ ಏನೇನಾಗಿದೆ? ಕಂಪ್ಲೀಟ್ ನ್ಯೂಸ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422