ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 JULY 2024
RAINFALL NEWS : ಹೊಸನಗರ ತಾಲೂಕಿನಲ್ಲಿ ಮಳೆ ಬಿರುಸಾಗಿದೆ. ತಾಲೂಕಿನ ಚಕ್ರಾ ವ್ಯಾಪ್ತಿಯಲ್ಲಿ ಮತ್ತು ಮಾಸ್ತಿಕಟ್ಟೆಯಲ್ಲಿ ಭಾರಿ ಮಳೆಯಾಗಿದೆ. ಇನ್ನು, ಚಕ್ರಾ ಚಲಾಶಯದ ಮೂಲಕ ಲಿಂಗನಮಕ್ಕಿ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ.
ತಾಲೂಕಿನಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ಮಳೆ?
ಕಳೆದ 24 ಗಂಟೆಯಲ್ಲಿ ಹೊಸನಗರ ತಾಲೂಕಿನ ಮಾಣಿ ವ್ಯಾಪ್ತಿಯಲ್ಲಿ 110 ಮಿ.ಮೀ, ಯಡೂರಿನಲ್ಲಿ 124 ಮಿ.ಮೀ, ಹುಲಿಕಲ್‌ನಲ್ಲಿ 158 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 165 ಮಿ.ಮೀ, ಚಕ್ರಾದಲ್ಲಿ 210 ಮಿ.ಮೀ, ಸಾವೇಹಕ್ಲುವಿನಲ್ಲಿ 106 ಮಿ.ಮೀ. ಮಳೆಯಾಗಿದೆ.
ಚಕ್ರಾದಿಂದ ಲಿಂಗನಮಕ್ಕಿಗೆ ನೀರು
ಭಾರಿ ಮಳೆಯಿಂದಾಗಿ ಜಲಾಶಯಗಳ ಒಳ ಹರಿವು ಹೆಚ್ಚಳವಾಗಿದೆ. ಮಾಣಿ ಜಲಾಶಯಕ್ಕೆ 9941 ಕ್ಯೂಸೆಕ್ ಒಳ ಹರಿವು ಇದೆ. ಪಿಕ್ ಅಪ್‌ಗೆ 2876 ಕ್ಯೂಸೆಕ್, ಸಾವೇಹಕ್ಲು ಜಲಾಶಯಕ್ಕೆ 3403 ಕ್ಯೂಸೆಕ್ ಒಳ ಹರಿವು ಇದೆ. ಚಕ್ರಾ ಜಲಾಶಯಕ್ಕೆ 5386 ಕ್ಯೂಸೆಕ್ ಒಳ ಹರಿವು ಇದೆ. 1458 ಕ್ಯೂಸೆಕ್ ನೀರನ್ನು ಲಿಂಗನಮಕ್ಕಿಗೆ ಹರಿಸಲಾಗುತ್ತಿದೆ.
ಇದನ್ನೂ ಓದಿ ⇓
ಹೊಸನಗರದಲ್ಲಿ ಭಾರಿ ಮಳೆ, ಭದ್ರಾವತಿಯಲ್ಲಿ ಅತಿ ಕಡಿಮೆ, 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422