ಶಿವಮೊಗ್ಗ ಜಿಲ್ಲೆ, ಶೇ.50ರಷ್ಟು ಕಡಿಮೆಯಾದ ಮಳೆ, ಹವಾಮಾನ ಇಲಾಖೆಯಿಂದ ಮತ್ತೊಂದು ಮುನ್ಸೂಚನೆ, ಏನಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 21 JULY 2024

RAINFALL UPDATE : ಕಳೆದ ಮೂರ್ನಾಲ್ಕು ದಿನದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಅಬ್ಬರಿಸುತ್ತಿದ್ದ ವರುಣ ವಿರಾಮ ನೀಡಿದ್ದಾನೆ. ಜಿಲ್ಲೆಯಾದ್ಯಂತ ಇವತ್ತು ಮಳೆ ಸಂಪೂರ್ಣ ತಗ್ಗಿದೆ. ಜು.20ರ ವರದಿ ಪ್ರಕಾರ ಜಿಲ್ಲೆಯಲ್ಲಿ 54.59 ಮಿ.ಮೀ ಮಳೆಯಾಗಿತ್ತು. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಕೇವಲ 27.40 ಮಿ.ಮೀ ಮಳೆಯಾಗಿದೆ. ಶೇ.50ರಷ್ಟು ಮಳೆ ಕಡಿಮೆಯಾಗಿದೆ.

ಜು.20ರ ಬೆಳಗ್ಗೆ 8.30ರಿಂದ ಜು.21ರ ಬೆಳಗ್ಗೆ 8.30ರವರೆಗೆ ಶಿವಮೊಗ್ಗದಲ್ಲಿ 13.30 ಮಿ.ಮೀ, ಭದ್ರಾವತಿಯಲ್ಲಿ 8.60 ಮಿ.ಮೀ, ತೀರ್ಥಹಳ್ಳಿ 37.90 ಮಿ.ಮೀ, ಸಾಗರ 41.70 ಮಿ.ಮೀ, ಶಿಕಾರಿಪುರ 12.30 ಮಿ.ಮೀ, ಸೊರಬ 22.90 ಮಿ.ಮೀ, ಹೊಸನಗರ 55.10 ಮಿ.ಮೀ ಮಳೆಯಾಗಿದೆ.

ಅಬ್ಬರಿಸುತ್ತಾ ಪುಷ್ಯ ಮಳೆ?

ಪುಷ್ಯ ಮಳೆ ಶುರುವಾಗಿದ್ದು ಮುಂದೆ ಅಬ್ಬರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಜ.25ರವರೆಗೆ ಹವಾಮಾನ ಇಲಾಖೆ ದೇಶಾದ್ಯಂತ ಮಳೆ ಮುನ್ಸೂಚನೆ ಪ್ರಕಟಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಮುಂದುವರೆಯಲಿದ್ದು, ತೀವ್ರತೆ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ. ಈ ಅವಧಿಯಲ್ಲಿ ಮೇಲ್ಮೈ ಗಾಳಿ ತೀವ್ರವಾಗಿರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಥಂಡಿ ವಾತಾವರಣ ಇದೆ.

ಇದನ್ನೂ ಓದಿ ⇓

ಶಿವಮೊಗ್ಗದ ಜೈಲು ಮೇಲೆ 50ಕ್ಕೂ ಹೆಚ್ಚು ಪೊಲೀಸರ ದಾಳಿ | ಇಲ್ಲಿದೆ ಶಿವಮೊಗ್ಗದ 3 ಫಟಾಫಟ್‌ ಸುದ್ದಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment