ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIKARIPURA, 26 JULY 2024 : ಕೊಟ್ಟಿಗೆಯಲ್ಲಿದ್ದ ದನಗಳನ್ನು (COW) ಕಳವು ಮಾಡುತ್ತಿದ್ದವರನ್ನು ಹಿಡಿಯಲು ಹೋದಾಗ ಕಾರು ಅಪಘಾತಕ್ಕೀಡಾಗಿ ನಾಲ್ವರು ಗಾಯಗೊಂಡಿದ್ದಾರೆ. ಶಿಕಾರಿಪುರ ತಾಲೂಕು ನೆಲವಾಗಿಲು ಸಮೀಪದ ಹೊಸನಗರ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಬೆಳಗಿನ ಜಾವ ದನಗಳ್ಳತನಕ್ಕೆ ಯತ್ನ
ವೀರಭದ್ರಯ್ಯ ಎಂಬುವವರ ಮನೆ ಹಿಂಭಾಗದ ಕೊಟ್ಟಿಗೆಯಲ್ಲಿ ಬೆಳಗಿನ ಜಾವ 3 ಗಂಟೆ ಹೊತ್ತಿಗೆ ದನಗಳು ಕೂಗಲು ಆರಂಭಿಸಿದ್ದವು. ವೀರಭದ್ರಯ್ಯ ಅವರು ಮನೆ ಬಾಗಿಲು ತೆರಯಲು ಹೋದಾಗ ಮುಂಬಾಗಿಲು ಹೊರಗಿನಿಂದ ಲಾಕ್ ಆಗಿತ್ತು. ಹಿಂಬಾಗಿಲ ಮೂಲಕ ಹೊರ ಹೋದಾಗ ನಾಲ್ವರು ಅಪರಿಚಿತರು ದನಗಳನ್ನು ಹೊಡೆದುಕೊಂಡು ಹೋಗುತ್ತಿದ್ದರು. ವೀರಭದ್ರಯ್ಯ ಅವರು ಜೋರಾಗಿ ಕೂಗಿಕೊಂಡಾಗ ಅಕ್ಕಪಕ್ಕದವರು ನೆರವಿಗೆ ಧಾವಿಸಿದ್ದಾರೆ. ಅಷ್ಟರಲ್ಲಿ ಕಳ್ಳರು ದನಗಳನ್ನ ಬಿಟ್ಟು ಬೊಲೇರೋ ವಾಹನದಲ್ಲಿ ಪರಾರಿಯಾಗಿದ್ದಾರೆ.

ಬೆನ್ನಟ್ಟಿ ಹೋದ ಗ್ರಾಮಸ್ಥರಿಗೆ ಗಾಯ
ಚನ್ನವೀರಯ್ಯ ಎಂಬುವವರಿಗೆ ಸೇರಿದ ಕಾರಿನಲ್ಲಿ ಕಳ್ಳರ ಬೊಲೇರೋ ವಾಹನವನ್ನು ಹಿಂಬಲಿಸಿದ್ದರು. ಮತ್ತಿಕೋಟೆ ಕ್ರಾಸ್ ಬಳಿ ಕಾರಿಗೆ ಕಳ್ಳರು ಬೊಲೋರೋ ವಾಹನವನ್ನು ಡಿಕ್ಕಿ ಹೊಡೆಸಿದ್ದಾರೆ. ಕಾರು ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರಿನಲ್ಲಿದ್ದ ವೀರಭದ್ರಯ್ಯ, ಕರಿಬಸಯ್ಯ, ವೀರಶಯ್ಯ, ಚನ್ನವೀರಯ್ಯ ಗಾಯಗೊಂಡಿದ್ದಾರೆ.
ಕೂಡಲೆ ಗಾಯಾಳುಗಳನ್ನು ಶಿಕಾರಿಪುರದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ⇓
ಲಿಂಗನಮಕ್ಕಿ ಜಲಾಶಯದಲ್ಲಿ ಗಂಗೆ ಪೂಜೆ, ಶರಾವತಿಗೆ ಬಾಗಿನ ಅರ್ಪಣೆ, ಗೇಟ್ ಮೇಲೆತ್ತಿ ನೀರು ಹೊರಕ್ಕೆ
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






