ಭದ್ರಾ ಜಲಾಶಯ, ಮೊದಲ ಅಲರ್ಟ್‌ ಪ್ರಕಟಿಸಿದ ನಿಗಮ, ಏನಿದು ಅಲರ್ಟ್‌?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

BHADRAVATHI, 26 JULY 2024 : ಭದ್ರಾ ಜಲಾಶಯಕ್ಕೆ ಒಳ ಹರಿವು ಏರಿಕೆಯಾಗಿದ್ದು, ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಯಾವುದೇ ಸಂದರ್ಭ ಕ್ರಸ್ಟ್‌ ಗೇಟ್‌ ಮೂಲಕ ನೀರು ಹೊರ ಬಿಡುವ ಸಾಧ್ಯತೆ ಇದೆ. ಹಾಗಾಗಿ ನೀರಾವರಿ ನಿಗಮದ ವತಿಯಿಂದ ಮೊದಲ ಅಲರ್ಟ್‌ (Alert) ಪ್ರಕಟಿಸಲಾಗಿದೆ.

ಏನಿದೆ ಮೊದಲ ಅಲರ್ಟ್‌ನಲ್ಲಿ?

ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದೆ. ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಜು.26ರಂದು ಜಲಾಶಯದ ನೀರಿನ ಮಟ್ಟ 174.3 ಅಡಿಗೆ ತಲುಪಿದೆ. ಒಳ ಹರಿವಿನ ಪ್ರಮಾಣ 35 ಸಾವಿರ ಕ್ಯೂಸೆಕ್‌ನಿಂದ 40 ಸಾವಿರ ಕ್ಯೂಸೆಕ್‌ ಇದೆ. ಇದೇ ರೀತಿ ಮುಂದುವರೆದರೆ ಶೀಘ್ರದಲ್ಲಿ ಭದ್ರಾ ಜಲಾಶಯದ ನೀರಿನ ಮಟ್ಟ ಗರಿಷ್ಠ ಹಂತಕ್ಕೆ ತಲುಪಲಿದೆ. ಯಾವುದೆ ಸಂದರ್ಭ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತದೆ ಎಂದು ತಿಳಿಸಲಾಗಿದೆ.

Bhadra-dam-General-Image

ಭದ್ರಾ ನದಿ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ಹೋಗಬೇಕು. ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ ⇓

ಸೂಡೂರು ಕಾಡಿನಲ್ಲಿ ಕಿರುತೆರೆ ನಟಿ ನೇತೃತ್ವದಲ್ಲಿ ವಿಭಿನ್ನ ಕಾರ್ಯಕ್ರಮ – 3 ಫಟಾಫಟ್‌ ನ್ಯೂಸ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment